Home ಟಾಪ್ ಸುದ್ದಿಗಳು ಕುಷ್ಟಗಿ: 7ಕ್ಕೂ ಹೆಚ್ಚು ಮಂದಿಗೆ ಹುಚ್ಚು ನಾಯಿ ಕಡಿತ

ಕುಷ್ಟಗಿ: 7ಕ್ಕೂ ಹೆಚ್ಚು ಮಂದಿಗೆ ಹುಚ್ಚು ನಾಯಿ ಕಡಿತ

ಕುಷ್ಟಗಿ: ನಗರದ ವಿವಿಧ ವಾರ್ಡ್‌ಗಳಲ್ಲಿ ಇಂದು ಸಂಜೆ ಹುಚ್ಚು ನಾಯಿಯೊಂದು ಏಳಕ್ಕೂ ಹೆಚ್ಚು ಮಂದಿಗೆ ಕಚ್ಚಿ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ.

ಸಿಕ್ಕ ಸಿಕ್ಕವರಿಗೆ ಹುಚ್ಚು ನಾಯಿ ಕಚ್ಚಿದ್ದು, ಈ ಬೆಳವಣಿಗೆಯಿಂದ ಜನರು ಹೊರಗೆ ಸಂಚರಿಸಲು ಭಯಪಟ್ಟು ಬೀದಿಗಳು ಬಿಕೋ ಎನ್ನುವಂತಾಗಿದೆ.

ನಾಯಿ ಕಡಿತಕ್ಕೊಳಗಾದ ಜನರು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಖಚಿತ ಪಡಿಸಿವೆ. ವಾರ್ಡಿನ ಸದಸ್ಯ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ ಪ್ರತಿಕ್ರಿಯಿಸಿ, ಹುಚ್ಚು ನಾಯಿ ಕಚ್ಚಿದ ಬಗ್ಗೆ ಮಾಹಿತಿ ಬಂದಿದ್ದು, ಕೂಡಲೇ ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದಿರುವೆ ಎಂದು ಹೇಳಿದ್ದಾರೆ.

Join Whatsapp
Exit mobile version