Home ಟಾಪ್ ಸುದ್ದಿಗಳು ಅಸ್ಸಾಂ: 1281 ಮದರಸಾಗಳನ್ನು ಸಾಮಾನ್ಯ ಶಾಲೆಗಳಾಗಿ ಬದಲಾಯಿಸಿದ ಸರ್ಕಾರ

ಅಸ್ಸಾಂ: 1281 ಮದರಸಾಗಳನ್ನು ಸಾಮಾನ್ಯ ಶಾಲೆಗಳಾಗಿ ಬದಲಾಯಿಸಿದ ಸರ್ಕಾರ

ಗುವಾಹಟಿ: 2018ರ ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರದ ನಿರ್ವಹಣೆಯಲ್ಲಿದ್ದ ಮದರಸಾಗಳಲ್ಲಿ ಕೆಲವನ್ನು ಮುಚ್ಚಲಾಗಿದ್ದು, ಈಗ ಉಳಿದವನ್ನು ಸಾಮಾನ್ಯ ಶಾಲೆಗಳನ್ನಾಗಿ ಪರಿವರ್ತಿಸಿ ಆದೇಶಿಸಲಾಗಿದೆ. ಅಸ್ಸಾಂನಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ 1300 ಮಾಧ್ಯಮಿಕ ಇಂಗ್ಲಿಷ್‌ (ಎಂಇ) ಮದರಸಾಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಾಮಾನ್ಯ ಮಾಧ್ಯಮಿಕ ಇಂಗ್ಲಿಷ್ ಶಾಲೆಗಳನ್ನಾಗಿ ಬದಲಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಈ ಕುರಿತು ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕಿ ಸುರಂಜನಾ ಸೇನಾಪತಿ ಆದೇಶ ಹೊರಡಿಸಿದ್ದು,
ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 1281 ಹಿರಿಯ ಪ್ರಾಥಮಿಕ ಮಾಧ್ಯಮಿಕ ಇಂಗ್ಲಿಷ್ ಮದರಸಾಗಳನ್ನು ಇನ್ನು ಮುಂದೆ ಎಂಇ ಶಾಲೆ ಎಂದಷ್ಟೇ ಕರೆಯಲಾಗುತ್ತದೆ ಎಂದಿದ್ದಾರೆ.

2021ರ ಏಪ್ರಿಲ್‌ನಲ್ಲಿ ರಾಜ್ಯ ಸರ್ಕಾರದ ಮದರಸಾ ಮಂಡಳಿ ಮೂಲಕ ನಿರ್ವಹಣೆಗೊಳ್ಳುತ್ತಿದ್ದ 610 ಮದರಸಾಗಳನ್ನು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನಾಗಿ ಪರಿವರ್ತಿಸಲಾಗಿತ್ತು. ಶಾಲೆಗಳ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವೇತನ, ಭತ್ಯೆಯಲ್ಲೂ ಯಾವುದೇ ಬದಲಾವಣೆ ಇಲ್ಲ ಎಂದು ಸುರಂಜನಾ ಸೇನಾಪತಿ ಹೇಳಿದ್ದಾರೆ.

ಈ ಶಾಲೆಗಳು ಹಿಂದೆ ಹೇಗೆ ಕಾರ್ಯನಿರ್ವಹಿಸುತ್ತಿದ್ದವೋ ಈಗಲೂ ಹಾಗೇ ಕಾರ್ಯನಿರ್ವಹಿಸಲಿದೆ. ಆದರೆ ಸರ್ಕಾರದ ನಿಯಮಾವಳಿಗೆ ತಕ್ಕಂತೆ ಸ್ವಲ್ಪ ಬದಲಾವಣೆ ಆಗಲಿದೆ ಎಂದು ಸೇನಾಪತಿ ತಿಳಿಸಿದ್ದಾರೆ.

Join Whatsapp
Exit mobile version