Home Uncategorized ಉಪನ್ಯಾಸಕರು ಜೀನ್ಸ್ ಪ್ಯಾಂಟ್-ಟೀಶರ್ಟ್ ಧರಿಸುವಂತಿಲ್ಲ: ವಿವಾದದ ಬಳಿಕ ಆದೇಶ ವಾಪಸ್

ಉಪನ್ಯಾಸಕರು ಜೀನ್ಸ್ ಪ್ಯಾಂಟ್-ಟೀಶರ್ಟ್ ಧರಿಸುವಂತಿಲ್ಲ: ವಿವಾದದ ಬಳಿಕ ಆದೇಶ ವಾಪಸ್

ಮೈಸೂರು: ಕರ್ತವ್ಯದ ಸಮಯದಲ್ಲಿ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್ ಧರಿಸುವಂತಿಲ್ಲ ಎಂದು DDPU ಶ್ರೀನಿವಾಸಮೂರ್ತಿ ಆದೇಶ ಹೊರಡಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಹೊರಡಿಸಲಾದ ಆದೇಶಕ್ಕೆ ಉಪನ್ಯಾಸಕರ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, DDPU ಆದೇಶವನ್ನು ರದ್ದು ಮಾಡಿದ್ದಾರೆ.

ಶನಿವಾರ ಹೊರಡಿಸಲಾದ ಆದೇಶದಲ್ಲಿ ಜಿಲ್ಲಾ ಉಪನಿರ್ದೇಶಕರ ಕಚೇರಿ ಮತ್ತು ಕಾಲೇಜುಗಳಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಕರ್ತವ್ಯದ ಸಮಯದಲ್ಲಿ ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್ ಧರಿಸುವಂತಿಲ್ಲ ಎಂದು ಸೂಚನೆ ನೀಡಲಾಗಿತ್ತು.

ಕಾಲೇಜುಗಳಲ್ಲಿ ಶಿಸ್ತಿನ ವಾತಾವರಣ ನಿರ್ಮಾಣದ ಜೊತೆಗೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಭಾಗವಹಿಸುವ ವೇಳೆ ಮುಜುಗರ ಆಗಬಾರದು ಎಂದ ಉದ್ದೇಶದಿಂದ ಆದೇಶ ಹೊರಡಿಸಿದ್ದೆ. ಆದರೆ ಈಗ ಆದೇಶ ವಾಪಾಸ್ ಪಡೆದಿದ್ದೇನೆ ಎಂದು DDPU ಶ್ರೀನಿವಾಸಮೂರ್ತಿ ಹೇಳಿದ್ದಾರೆ.

Join Whatsapp
Exit mobile version