ಶ್ರೀನಗರ:ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಫಾರೂಕ್ ಅಬ್ದುಲ್ಲಾ ರಾತ್ರಿ ವೇಳೆ ಗೌಪ್ಯವಾಗಿ ಮಾತುಕತೆ ನಡೆಸುತ್ತಾರೆ. ಸಾರ್ವಜನಿಕರ ಕಣ್ತಪ್ಪಿಸಿ ಈ ಭೇಟಿ ನಡೆಯುತ್ತಿದೆ ಎಂದು ಖಾಸಗಿ ಸುದ್ದಿ ವಾಹನಿಗೆ ನೀಡಿದ ಸಂದರ್ಶನದ ವೇಳೆ ಗುಲಾಂ ನಬಿ ಆಜಾದ್ ಆರೋಪ ಮಾಡಿದ್ದರು. ಇದಕ್ಕೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ವರಿಷ್ಠ ಫಾರೂಕ್ ಅಬ್ದುಲ್ಲಾ ಗರಂ ಆಗಿ, ಆಝಾದ್ ಈ ರೀತಿ ಆರೋಪಿಸಿ ನನಗೆ ಅಪಕೀರ್ತಿ ತರಲು ಯತ್ಮಿಸುತ್ತಾರೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಫಾರುಕ್ ಅಬ್ದುಲ್ಲಾ, ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ನಾನು ನನ್ನ ಮಗ ಹಗಲಿನಲ್ಲೇ ಹೋಗುತ್ತೇವೆ. ರಾತ್ರಿ ಯಾಕೆ ಹೋಗಬೇಕು ಎಂದು ಕೇಳಿದ್ದಾರೆ.
ಗುಲಾಂ ನಬಿ ಆಜಾದ್ ಅವರು ನನಗೆ ಅಪಕೀರ್ತಿ ತರುವ ಅವರ ಆಲೋಚನೆ ಹಿಂದೆ ಯಾವ ಕಾರಣವಿದೆ ಎಂಬುದು ನನಗೆ ತಿಳಿದಿಲ್ಲ. ಯಾರು ರಾಜ್ಯಸಭಾ ಸ್ಥಾನವನ್ನು ಕೊಡದೇ ಇದ್ದಾಗ ಅವರನ್ನು ಕರೆದು ಕೊಟ್ಟಿದ್ದೇನೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮನೆಯಲ್ಲಿ ಕುಳಿತಿರುವ ಏಜೆಂಟ್ ಯಾರು ಎಂದು ಅವರೇ ಹೇಳಬೇಕು ಎಂದು ಹೇಳಿದ್ದಾರೆ.