ಲಖನೌ: ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳು ಬಿರುಸಿನ ಚಟುವಟಿಕೆ ಪ್ರಾರಂಭಿಸಿವೆ. ಪಕ್ಷಾಂತರ, ಟೀಕೆ, ಸವಾಲ್ ಜೋರಾಗುತ್ತಿವೆ. ರಾಹುಲ್ ಗಾಂಧಿಗೆ ಧೈರ್ಯವಿದ್ದರೆ ಅಮೇಥಿಯಿಂದ ಸ್ಪರ್ಧಿಸಲಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸವಾಲ್ ಹಾಕಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಮೇಥಿಯ ಮಾಜಿ ಸಂಸದ ರಾಹುಲ್ ಗಾಂಧಿ ಅವರು ಅಮೇಥಿಯ ಜನರನ್ನು ಅವಮಾನಿಸಿದ್ದಾರೆ. 500 ವರ್ಷಗಳ ಹೋರಾಟದ ಬಳಿಕ ಸಿಕ್ಕ ಗೆಲುವಿನಲ್ಲಿ ಆಯೋಧ್ಯೆಯಲ್ಲಿ ನಿರ್ಮಾಣವಾದ ರಾಮ್ ಲಲ್ಲಾ ಅವರ ದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನವನ್ನು ಗಾಂಧಿ ಕುಟುಂಬ ತಿರಸ್ಕರಿಸಿ ಅವಮಾನ ಮಾಡಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಧೈರ್ಯವಿದ್ದರೆ ಈ ಬಾರಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದ ಸ್ಪರ್ಧಿಸಲಿ ನಾನು ಅವರ ವಿರುದ್ಧ ಏಕಾಂಗಿಯಾಗಿ ಸ್ಪರ್ಧಿಸುವುತ್ತೇನೆ ಎಂದು ರಾಹುಲ್ ಗಾಂಧಿಗೆ ಸವಾಲ್ ಹಾಕಿದ್ದಾರೆ.