Home ಟಾಪ್ ಸುದ್ದಿಗಳು ಸ್ವಯಂ ಘೋಷಿತ ದೇವಮಾನವ ನಿತ್ಯಾನಂದಗೆ ಹೈಕೋಟ್ ನೋಟಿಸ್

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದಗೆ ಹೈಕೋಟ್ ನೋಟಿಸ್

ಬೆಂಗಳೂರು: ಆಶ್ರಮದಲ್ಲಿ ಭಕ್ತನನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನಿಗೆ ಕರ್ನಾಟಕ ಹೈಕೋಟ್ ನೋಟಿಸ್ ನೀಡಿದೆ.

ಜಾರ್ಖಂಡ್‌ನ ಮಾಜಿ ಇನ್ಫೋಸಿಸ್ ಸಾಫ್ಟ್ವೇರ್ ಎಂಜಿನಿಯರ್ ಕೃಷ್ಣಕುಮಾರ್ ಪಾಲ್ ಸುಮಾರು ಎರಡು ವರ್ಷಗಳಿಂದ ತನ್ನ ಕುಟುಂಬಕ್ಕೆ ಸಂಪರ್ಕಕ್ಕೆ ಸಿಕ್ಕಿಲ್ಲ. ಕುಟುಂಬವು ಕರ್ನಾಟಕ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದೆ. ನಿತ್ಯಾನಂದನ ಆಶ್ರಮದಲ್ಲಿ ಬಂಧಿಯಾಗಿರುವ ತಮ್ಮ ಮಗನನ್ನ ಭೇಟಿ ಮಾಡಲು ಪದೇ ಪದೇ ಮಾಡಿದ ಪ್ರಯತ್ನಗಳನ್ನು ಆಶ್ರಮದ ಅಧಿಕಾರಿಗಳು ವಿಫಲಗೊಳಿಸಿದ್ದಾರೆ ಎಂದು ಕುಟುಂಬ ದೂರಿದೆ.

ಜಾರ್ಖಂಡ್ ಪೊಲೀಸರು ಪ್ರಕರಣವನ್ನು ರಾಮನಗರದ ಸ್ಥಳೀಯ ಅಧಿಕಾರಿಗಳಿಗೆ ವರ್ಗಾಯಿಸಿದ್ದಾರೆ. ಆದರೆ ಇದುವರೆಗೂ ಕೃಷ್ಞ ಕುಮಾರ್‌ನನ್ನು ಭೇಟಿಯಾಗಲು ಸಾಧ್ಯವಾಗದೇ ಹತಾಶರಾದ ಕೃಷ್ಣಕುಮಾರ್ ಕುಟುಂಬ ಹೈಕೋರ್ಟ್ ಮೊರೆ ಹೋಗಿದ್ದಾರೆ. ಹೈಕೋರ್ಟ್ ರಾಮನಗರ ಎಸ್ಪಿ ಮೂಲಕ ಸ್ವಾಮಿ ನಿತ್ಯಾನಂದನಿಗೆ ನೋಟಿಸ್ ನೀಡಿದೆ.

Join Whatsapp
Exit mobile version