Home ಟಾಪ್ ಸುದ್ದಿಗಳು ಸಕಲೇಶಪುರ ಬೈಪಾಸ್’ನಲ್ಲಿ ಹಲವೆಡೆ ಭೂ ಕುಸಿತ

ಸಕಲೇಶಪುರ ಬೈಪಾಸ್’ನಲ್ಲಿ ಹಲವೆಡೆ ಭೂ ಕುಸಿತ

►ಬೆಂಗಳೂರು- ಮಂಗಳೂರು ಸಂಚಾರಕ್ಕೆ ಅಡ್ಡಿ


ಹಾಸನ: ಹಾಸನ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭಾರಿ ಮಳೆ ಮುಂದುವರಿದಿದ್ದು, ನಿರ್ಮಾಣ ಹಂತದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹಲವೆಡೆ ಭೂ ಕುಸಿತ ಸಂಭವಿಸಿದೆ.


ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಢಿಘಾಟ್ ಮಾರ್ಗದ ಸಕಲೇಶಪುರ ಬೈಪಾಸ್ ನಲ್ಲಿ ಹಲವೆಡೆ ದೊಡ್ಡ ದೊಡ್ಡ ಬಂಡೆ ಕಲ್ಲುಗಳ ಜೊತೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದಿದೆ.

ತಡೆಗೋಡೆ ನಿರ್ಮಿಸದೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವ ಹಲವೆಡೆ ಭೂ ಕುಸಿತ ಸಂಭವಿಸಿದೆ. ಚತುಷ್ಪತ ರಸ್ತೆಯಲ್ಲಿ ಮಣ್ಣು ಕುಸಿದಿರುವ ಕಾರಣ ಬೈಪಾಸ್ ರಸ್ತೆಯ ಒಂದು ಬದಿಯ ಸಂಚಾರ ಸ್ಥಗಿತಗೊಂಡಿದೆ. ನಿರ್ಮಾಣ ಹಂತದಲ್ಲೇ ಹಲವೆಡೆ ಕಾಂಕ್ರೀಟ್ ರಸ್ತೆ ಬಿರುಕುಬಿಟ್ಟಿದೆ. ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಯ ಗುಣಮಟ್ಟ ಹಾಳಾಗಿರುವ ಬಗ್ಗೆ ಇದೀಗ ಆಕ್ಷೇಪಗಳು ಕೇಳಿಬಂದಿವೆ.

Join Whatsapp
Exit mobile version