Home ಕರಾವಳಿ ಮೂಲ ಸೌಕರ್ಯದ ಕೊರತೆ; ಸ್ಟ್ರೆಚರ್‌ ನಲ್ಲಿ ವೃದ್ಧೆಯ ಸಾಗಾಟ

ಮೂಲ ಸೌಕರ್ಯದ ಕೊರತೆ; ಸ್ಟ್ರೆಚರ್‌ ನಲ್ಲಿ ವೃದ್ಧೆಯ ಸಾಗಾಟ

ಸುಳ್ಯ: ಅನಾರೋಗ್ಯ ಪೀಡಿತ ವೃದ್ಧೆಯೊಬ್ಬರನ್ನು ಸ್ಟ್ರೆಚರ್‌ ನಲ್ಲಿ ತೋಡಿನ ಮೂಲಕ ಆಸ್ಪತ್ರೆಗೆ ಸಾಗಿಸಿದ ಘಟನೆ ಜಾಲ್ಸೂರು ಗ್ರಾಮದ ಮರಸಂಕ ಎಂಬಲ್ಲಿ ನಡೆದಿದೆ.

ಈ ಪ್ರದೇಶದಲ್ಲಿರುವ  ಕಾಲುಸಂಕ  ಮುಖ್ಯ ರಸ್ತೆಗಿಂತ ದೂರದಲ್ಲಿದೆ. ಮೂಲ ಸೌಕರ್ಯಗಳಾದ ರಸ್ತೆ, ಸೇತುವೆಯ ಕೊರೆತೆಯಿಂದಾಗಿ ತುರ್ತು ಸಂದರ್ಭದಲ್ಲಿ  ಸ್ಥಳೀಯರು ಈ ತೋಡಿನ ದಾರಿಯನ್ನೇ ಆಶ್ರಯಿಸಬೇಕಾಗಿದೆ.

ಇಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂಬುವುದು ಜನರ  ಅತ್ಯಗತ್ಯ ಬೇಡಿಕೆಯಾಗಿದ್ದು,  ಅಪಾಯಕಾರಿ ಪರಿಸ್ಥಿತಿಯ ಬಗ್ಗೆ  ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Join Whatsapp
Exit mobile version