Home ಟಾಪ್ ಸುದ್ದಿಗಳು ‘ದತ್ತಾ’ ಹೆಸರಿನ ಬದಲಿಗೆ ‘ಕುತ್ತಾ’: ಅಧಿಕಾರಿ ಮುಂದೆ ನಾಯಿಯಂತೆ ಬೊಗಳಿದ ವ್ಯಕ್ತಿ!

‘ದತ್ತಾ’ ಹೆಸರಿನ ಬದಲಿಗೆ ‘ಕುತ್ತಾ’: ಅಧಿಕಾರಿ ಮುಂದೆ ನಾಯಿಯಂತೆ ಬೊಗಳಿದ ವ್ಯಕ್ತಿ!

ಕೋಲ್ಕತ್ತಾ: ಪಡಿತರ ಚೀಟಿಯಲ್ಲಿ ‘ದತ್ತಾ’ ಹೆಸರಿನ ಬದಲಿಗೆ ‘ಕುತ್ತಾ’ ಎಂದು ಮುದ್ರಿಸಿದ ಅಧಿಕಾರಿಯ ಎದುರು ವ್ಯಕ್ತಿಯೊಬ್ಬರು ನಾಯಿಯಂತೆ ಬೊಗಳಿ ತನ್ನ ಆಕ್ರೋಶ ಹೊರ ಹಾಕಿದ ಘಟನೆ ಬಂಕುರಾ ಜಿಲ್ಲೆಯ ಕೇಶಿಕೋಲ್ ನಲ್ಲಿ ನಡೆದಿದೆ.


ಇದೇ ಗ್ರಾಮದ ನಿವಾಸಿಯಾದ ಶ್ರೀಕಂತಿ ದತ್ತಾ ಎಂಬುವವರ ಹೆಸರನ್ನು ಪಡಿತರ ಚೀಟಿಯಲ್ಲಿ ಮುದ್ರಣದ ವೇಳೆ ಅಧಿಕಾರಿಗಳು ದತ್ತಾ ಬದಲಿಗೆ ಕುತ್ತಾ (ಹಿಂದಿಯ ಪದ) ಎಂದರೆ ನಾಯಿ ಎಂದು ಮುದ್ರಿಸಿದ್ದರು.


ಶ್ರೀಕಾಂತಿ ದತ್ತಾ ಅವರು ತನ್ನ ಹೆಸರನ್ನು ತಿದ್ದುಪಡಿ ಮಾಡಲು ಮೂರು ಬಾರಿ ಅರ್ಜಿ ಸಲ್ಲಿಸಿದ್ದರು. ಆದರೂ, ಹೆಸರು ತಿದ್ದುಪಡಿ ಆಗಿರಲಿಲ್ಲ.
ಇದರಿಂದ ಕೋಪಗೊಂಡ ಶ್ರೀಕಂತಿ ದತ್ತಾ ಅಧಿಕಾರಿಯ ವಾಹನವು ಹಾದು ಹೋಗುತ್ತಿದ್ದಾಗ ನಾಯಿಯಂತೆ ಬೊಗಳಗಿ, ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Join Whatsapp
Exit mobile version