Home ಟಾಪ್ ಸುದ್ದಿಗಳು ವಾರಾಣಸಿ: ಪ್ರಧಾನಿ ಮೋದಿ ವಿರುದ್ಧ ಕಣಕ್ಕಿಳಿದವರ ಸಂಖ್ಯೆ 2014ರಲ್ಲಿ 41, ಈ ಬಾರಿ ಕೇವಲ 6

ವಾರಾಣಸಿ: ಪ್ರಧಾನಿ ಮೋದಿ ವಿರುದ್ಧ ಕಣಕ್ಕಿಳಿದವರ ಸಂಖ್ಯೆ 2014ರಲ್ಲಿ 41, ಈ ಬಾರಿ ಕೇವಲ 6

ನವದೆಹಲಿ: ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದು, ಅವರ ವಿರುದ್ಧ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಸೇರಿದಂತೆ ಆರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

2014 ರಲ್ಲಿ, ಮೋದಿ ವಾರಾಣಸಿಯಿಂದ ಮೊದಲ ಬಾರಿಗೆ ಸ್ಪರ್ಧಿಸಿ ಪ್ರಧಾನಿಯಾದಾಗ, ಅವರ ವಿರುದ್ಧ 41 ಮಂದಿ ಸ್ಪರ್ಧಿಸಿದ್ದರು. ಆದರೆ ಅದರ ಸಂಖ್ಯೆ ಈ ಬಾರಿ ಚುನಾವಣೆ ವೇಳೆಗೆ 6ಕ್ಕೆ ಇಳಿದಿದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಅಜಯ್ ರಾವ್ ಸೇರಿದಂತೆ 6 ಮಂದಿ ಕಣದಲ್ಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಈ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೂ ಮುನ್ನ ಈ ಕ್ಷೇತ್ರವನ್ನು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಪ್ರತಿನಿಧಿಸುತ್ತಿದ್ದರು.

ವಾರಾಣಸಿಯಲ್ಲಿ ಮತದಾನವು ಜೂನ್​ 1ರಂದು ಕೊನೆಯ ಹಂತದಲ್ಲಿ ನಡೆಯಲಿದೆ. ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಬ್ರಾಹ್ಮಣರು, ಭೂಮಿಹಾರ್​ಗಳು ಹಾಗೂ ಜೈಸ್ವಾಲ್ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯಗಳ ನಂತರ ಮುಸ್ಲಿಂ ಹಾಗೂ ಇತರೆ ಹಿಂದುಳಿದ ವರ್ಗಗಳ ಸಮುದಾಯಗಳಿವೆ.

Join Whatsapp
Exit mobile version