Home ಟಾಪ್ ಸುದ್ದಿಗಳು ಶಾಸಕ ಬಿ ಆರ್ ಪಾಟೀಲ್ ಪತ್ರ: ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ

ಶಾಸಕ ಬಿ ಆರ್ ಪಾಟೀಲ್ ಪತ್ರ: ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ

ಮೈಸೂರು: ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ ಅಸಮಾಧಾನ ವಿಚಾರದಲ್ಲಿ ಸರ್ಕಾರ ಸೆಲ್ಫ್ ಸೂಸೈಡ್ ಆಗುತ್ತಾ? ಅಪಘಾತ ಅಥವಾ ಹಿಟ್ ವಿಕೆಟ್ ಆಗುತ್ತಾ? ಎಲ್ಲದಕ್ಕೂ ಕಾದು ನೋಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ರಾಜ್ಯ ಸರ್ಕಾರದ ಆಡಳಿತ ವೈಖರಿ ಬಗ್ಗೆ ಕಿಡಿ ಕಾರಿದರು.


ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತಮಾಡಿದ ಅವರು, ಇದು ಕೇವಲ ಬಿ ಆರ್ ಪಾಟೀಲ್ ಒಬ್ಬರ ಸಮಸ್ಯೆ ಅಲ್ಲ. ಇಡೀ ವ್ಯವಸ್ಥೆಯ ಸಮಸ್ಯೆಯೇ ಹೀಗಾಗಿದೆ. ಎಲ್ಲದಕ್ಕೂ ಕಾಲವೇ ಉತ್ತರಸಲಿದೆ. ಕಾದು ನೋಡಿ. ಹೀಗೆ ಆಗುತ್ತದೆ, ಹಾಗೆ ಆಗುತ್ತದೆ ಅಂತ ಹೇಳಲು ನಾನು ಜ್ಯೋತಿಷಿ ಅಲ್ಲ. ಹಿರಿಯ ಶಾಸಕರು ಅವರದ್ದೇ ಪಕ್ಷದ ಮಂತ್ರಿಗಳಿಂದ ಮನನೊಂದು ಪಕ್ಷ ಬದಲಾವಣೆ ಮಾಡಿದರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಆಡಳಿತ ಪಕ್ಷದ ಶಾಸಕರ ಪರಿಸ್ಥಿತಿಯೇ ಹೀಗಾದರೆ ಜನರ ಕಷ್ಟ ಏನಾಗಬೇಕು ಎಂದು ಪ್ರಶ್ನೆ ಮಾಡಿದರು.

Join Whatsapp
Exit mobile version