Home ಕರಾವಳಿ ವಿಮೆನ್ ಇಂಡಿಯಾ ಮ್ಮೂಮೆಂಟ್ ದ.ಕ ಜಿಲ್ಲಾ ಸಮಿತಿ ವತಿಯಿಂದ ಮಾಸಿಕ ಸಭೆ

ವಿಮೆನ್ ಇಂಡಿಯಾ ಮ್ಮೂಮೆಂಟ್ ದ.ಕ ಜಿಲ್ಲಾ ಸಮಿತಿ ವತಿಯಿಂದ ಮಾಸಿಕ ಸಭೆ

ಮಂಗಳೂರು: ವಿಮೆನ್ ಇಂಡಿಯಾ ಮ್ಮೂಮೆಂಟ್ (ವಿಮ್) ದ.ಕ ಜಿಲ್ಲಾ ಸಮಿತಿ ವತಿಯಿಂದ ಮಾಸಿಕ ಸಭೆಯು ಮಂಗಳವಾರ ಜಿಲ್ಲಾಧ್ಯಕ್ಷರಾದ ನೌರಿನಾ ಆಲಂಪಾಡಿ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆಯಿತು. 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ನೌರಿನಾ ಆಲಂಪಾಡಿಯವರು ಪ್ರಸಕ್ತ ಸನ್ನಿವೇಶದಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ರಾಜಕೀಯದಲ್ಲಿ ಮಹಿಳೆಯರ ಪಾತ್ರ ಹಾಗೂ ಮುಂದಿನ ದಿನಗಳಲ್ಲಿ ತಳಮಟ್ಟದಲ್ಲಿ ವಿಮ್ ಬೆಳವಣಿಗೆಗೆ ಸದಸ್ಯರನ್ನು ಸದಸತ್ವ ಅಭಿಯಾನದ ಮೂಲಕ ಸೇರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮ್ಮೂಮೆಂಟ್ (ವಿಮ್) ದ.ಕ ಜಿಲ್ಲಾ ಉಪಾಧ್ಯಕ್ಷರಾದ ವೀಣಾ ಬಜ್ಪೆ, ಝಹನಾ ಬಂಟ್ವಾಳ, ಸಮಿತಿ ಸದಸ್ಯರು ಮತ್ತು ಕ್ಷೇತ್ರ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ದ.ಕ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ನಿಶಾ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಅಝ್ವಿನಾ  ಕಾಟಿಪಳ್ಳ ಧನ್ಯವಾದಗೈದರು.

Join Whatsapp
Exit mobile version