Home ಟಾಪ್ ಸುದ್ದಿಗಳು ಒಂದು ಚುನಾವಣೆ ಗೆಲ್ಲೋಕೆ ಒಬ್ಬರ ಜೀವದ ಜೊತೆ ಆಟವಾಡೋದು ಸರಿಯಲ್ಲ: ಪ್ರಿಯಾಂಕ್ ಖರ್ಗೆ

ಒಂದು ಚುನಾವಣೆ ಗೆಲ್ಲೋಕೆ ಒಬ್ಬರ ಜೀವದ ಜೊತೆ ಆಟವಾಡೋದು ಸರಿಯಲ್ಲ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಒಂದು ಚುನಾವಣೆ ಗೆಲ್ಲೋಕೆ ಒಬ್ಬರ ಜೀವದ ಜೊತೆ ಆಟವಾಡೋದು ಸರಿಯಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಕೋರ್ಟ್ ರಿಲೀಫ್ ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಯವರಿಗೆ ನಾಚಿಕೆ ಆಗಬೇಕು. ಒಂದು ಚುನಾವಣೆ ಗೆಲ್ಲಲಿಕ್ಕೆ ಒಬ್ಬರ ಜೀವನದ ಜೊತೆಗೆ ಆಟ ಆಡ್ತೀರಾ? ಡಿಕೆಶಿಯವರನ್ನು ಕಟ್ಟಿ ಹಾಕಬೇಕು ಅಂತ ಎಷ್ಟು ಬೇಗ ಫೈಲ್ ಮೂವ್ ಮಾಡಿದ್ರಿ? ಕೇವಲ ಮೌಖಿಕ ಆದೇಶ ನೀಡಿ ಸಿಬಿಐಗೆ ನೀಡಿದ್ರಿ. ಇದನ್ನು ರಾಜಕೀಯ ಪ್ರೇರಿತ ಎನ್ನದೇ ಬೇರೆ ಏನು ಹೇಳಬೇಕು ಎಂದು ಪ್ರಶ್ನಿಸಿದ್ದಾರೆ. ಅವತ್ತು ಏನೇನೋ ಪೋಸ್ಟ್ ಹಾಕುತ್ತಿದ್ದವರು ಈಗ ಏನು ಉತ್ತರ ಕೊಡ್ತೀರಾ? ಸಿಬಿಐ ಮಾನದಂಡದ ಪ್ರಕಾರ ಅವತ್ತು ಎಫ್ ಐಆರ್ ಇತ್ತಾ ಇಲ್ವಾ, ಅಷ್ಟೇ ಉತ್ತರ ಹೇಳಲಿ ಬಿಜೆಪಿಯವರು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Join Whatsapp
Exit mobile version