ಮಡಿಕೇರಿ: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳ ಸಹಕಾರದೊಂದಿಗೆ ಅನಾಥ ವೃದ್ಧೆಯನ್ನು ರಕ್ಷಣೆ ಮಾಡಿ ಕೂಡಿಗೆ ಶಕ್ತಿ ಅನಾಥಾಶ್ರಮ ಸೇರಿಸಿದ ಶಿವರಾಮೇಗೌಡರ ಕರವೇ ಕಾರ್ಯಕರ್ತರು ಮಾನವೀಯತೆ ಮರೆದಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಗಲು ರಾತ್ರಿ ಎನ್ನದೆ ಮಳೆಯಲ್ಲಿ ನೆನೆಯುತ್ತಿದ್ದ 75 ವರ್ಷದ ಅಜ್ಜಿ ಜೀವನ ನಡೆಸಲು ಪರದಾಡುತ್ತಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಕೊಡ್ಲಿಪೇಟೆ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ತಿಳಿಸಿ ವೃದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ಸದ್ಯ ಮಾನಸಿಕ ಅಸ್ವಸ್ಥರಾಗಿರುವ ವೃದ್ಧೆಯನ್ನು ಕೂಡಿಗೆಯ ಶಕ್ತಿ ಆಶ್ರಮಕ್ಕೆ ಸೇರಿಸಿಲಾಗಿದೆ. ಅಜ್ಜಿಯನ್ನ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಕಾರ್ಯಕರ್ತರಿಗೆ ಹಾಗೂ ಸಹಕಾರ ನೀಡಿದ ಗ್ರಾಮ ಪಂಚಾಯಿತಿ ಸದಸ್ಯರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.