Home ಟಾಪ್ ಸುದ್ದಿಗಳು ಮುಂಗಾರು ಅಧಿವೇಶನ ಆರಂಭ: ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಕಲಾಪ ಮುಂದೂಡಿಕೆ

ಮುಂಗಾರು ಅಧಿವೇಶನ ಆರಂಭ: ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಕಲಾಪ ಮುಂದೂಡಿಕೆ

ನವದೆಹಲಿ: ಮುಂಗಾರು ಅಧಿವೇಶನ ಇಂದಿನಿಂದ ಆರಂಭಗೊಂಡಿದ್ದು, ಇಂದೇ ರಾಷ್ಟ್ರಪತಿ ಚುನಾವಣೆ ಇರುವ ಕಾರಣಕ್ಕೆ ಲೋಕಸಭೆಯನ್ನು ಮಧ್ಯಾಹ್ನದವರೆಗೆ ಮತ್ತು ರಾಜ್ಯಸಭೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.


ರಾಜನಾಥ್ ಸಿಂಗ್ ಸುಗಮ ಕಲಾಪಕ್ಕೆ ಮನವಿ ಮಾಡಿಕೊಂಡರು. ಆದರೆ ಮಧ್ಯಾಹ್ನ 2 ಗಂಟೆಗೆ ಲೋಕ ಸಭೆ ಆರಂಭವಾಗುತ್ತಲೇ ಅಗ್ನಿಪಥ ನೇಮಕಾತಿಯನ್ನು ಪ್ರಶ್ನಿಸಲು ಪ್ರತಿಪಕ್ಷಗಳು ತಯಾರಿ ಮಾಡಿಕೊಂಡಿವೆ.
ರಾಷ್ಟ್ರಪತಿ ಚುನಾವಣೆ ಮತದಾನ ನಡೆಯುತ್ತಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವ್ಹೀಲ್ ಚೇರಿನಲ್ಲಿ ಬಂದು ಮತ ಚಲಾಯಿಸಿದರು ಎಂದು ವರದಿಯಾಗಿದೆ.

Join Whatsapp
Exit mobile version