Home ಟಾಪ್ ಸುದ್ದಿಗಳು ಚಿನ್ನ ಕಳ್ಳಸಾಗಣೆ ಹಗರಣ| ಕೇರಳದ ಸ್ವಪ್ನಾ ಸುರೇಶ್‌ಗೆ ಜಾಮೀನು

ಚಿನ್ನ ಕಳ್ಳಸಾಗಣೆ ಹಗರಣ| ಕೇರಳದ ಸ್ವಪ್ನಾ ಸುರೇಶ್‌ಗೆ ಜಾಮೀನು

ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಯುಎಪಿಎ ಕಾಯ್ದೆಯಡಿ ಬಂಧಿತಳಾಗಿದ್ದ ಕೇರಳದ ಸ್ವಪ್ನಾ ಸುರೇಶ್‌ಗೆ ಕೇರಳ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಬಂಧನಕ್ಕೊಳಗಾಗಿ ಒಂದು ವರ್ಷದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿರುವ ಸ್ವಪ್ನಾ, ಇಂದು(ಮಂಗಳವಾರ) ಜೈಲಿನಿಂದ ಹೊರಬರುವ ಸುಳಿವು ಸಿಕ್ಕಿದೆ. ಜಾಮೀನು ಲಭಿಸಿದ ಏಳು ಆರೋಪಿಗಳ ಪೈಕಿ ಸಪ್ನಾ ಮಾತ್ರ ಇಂದು ಬಿಡುಗಡೆಯಾಗಬಹುದು.
ಸಪ್ನಾ ಮೇಲೆ ಹೇರಲಾಗಿದ್ದ ಕೊಫೆಪೋಸಾವನ್ನು ಹೈಕೋರ್ಟ್ ನಿನ್ನೆ ರದ್ದುಗೊಳಿಸಿತ್ತು. ಈ ಹಿಂದೆ ಕಸ್ಟಮ್ಸ್ ಮತ್ತು ಈಡಿ ಪ್ರಕರಣಗಳಲ್ಲಿ ಸಪ್ನಾ ಜಾಮೀನು ಪಡೆದಿದ್ದರು.

ಆದರೆ, ಸ್ವಪ್ನಾ ಜೊತೆ ಜಾಮೀನು ಪಡೆದ ಉಳಿದ ಏಳು ಆರೋಪಿಗಳ ಕೊಫೆಪೋಸಾ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಸ್ವಪ್ನಾ ಹೊರತುಪಡಿಸಿ ಉಳಿದವರಿಗೆ ಇಂದು ಬಿಡುಗಡೆ ಸಾಧ್ಯವಿಲ್ಲ ಎಂದು ತಿಳಿದುಬಂದಿದೆ.

Join Whatsapp
Exit mobile version