Home ಟಾಪ್ ಸುದ್ದಿಗಳು ತಾವೇ ಹಲ್ಲೆಗೈದು ಮುಸ್ಲಿಮರ ಕೃತ್ಯವೆಂದು ಸುಳ್ಳು ಹೇಳಿ ಆಸ್ಪತ್ರೆಗೆ ದಾಖಲು: ‘NO Halal’ ಹೋಟೆಲ್ ಕುಖ್ಯಾತಿಯ...

ತಾವೇ ಹಲ್ಲೆಗೈದು ಮುಸ್ಲಿಮರ ಕೃತ್ಯವೆಂದು ಸುಳ್ಳು ಹೇಳಿ ಆಸ್ಪತ್ರೆಗೆ ದಾಖಲು: ‘NO Halal’ ಹೋಟೆಲ್ ಕುಖ್ಯಾತಿಯ ತುಷಾರ ದಂಪತಿ ಬಂಧನ

►ಬಂಧನಕ್ಕೆ ಹೆದರುವುದಿಲ್ಲವೆಂದಿದ್ದ ದಂಪತಿ ಆಸ್ಪತ್ರೆಯಿಂದಲೇ ಪರಾರಿಯಾಗಿದ್ದರು!

ಕೊಚ್ಚಿ: ಹಲಾಲ್ ಅಲ್ಲದ ಹೋಟೆಲ್ ತೆರೆದಿದ್ದಕ್ಕೆ ತಮ್ಮನ್ನು ಥಳಿಸಲಾಗಿದೆ ಎಂದು ಸುಳ್ಳು ಪ್ರಚಾರ ಮಾಡಿದ್ದ ಕೇರಳದ ‘NO HALAL’ ಕುಖ್ಯಾತಿಯ ತುಷಾರ ಮತ್ತು ಆಕೆಯ ಪತಿಯನ್ನು ಬಂಧಿಸಲಾಗಿದೆ.


ಪಾಲಕ್ಕಾಡ್ ಸೇರಿದಂತೆ ಸ್ಥಳಗಳಿಗೆ ಅವರ ಪತ್ತೆಗಾಗಿ ತೀವ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ದಂಪತಿ ಜೊತೆ ಇನ್ನಿಬ್ಬರನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ ಆರಕ್ಕೇರಿದೆ.

ಯುವಕರ ಮೇಲೆ ಹಲ್ಲೆ ನಡೆಸಿದ ಪ್ರಕರಣದಿಂದ ಪಾರಾಗಲು ಹಲಾಲ್ ಅಲ್ಲದ ಆಹಾರ ನೀಡಿದ್ದಕ್ಕೆ ಜಿಹಾದ್ ಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತುಷಾರ ದಂಪತಿ ಫೇಸ್ ಬುಕ್ ನಲ್ಲಿ ಸುಳ್ಳು ಪ್ರಚಾರ ಮಾಡಿದ್ದರು ಎಂದು ಕೊಚ್ಚಿ ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

“ನಾವು ಬಂಧನಕ್ಕೆ ಹೆದರುವುದಿಲ್ಲ. ಹಲಾಲ್ ಅಲ್ಲದ ಆಹಾರ ತಿನ್ನುವ ಹಿಂದೂಗಳ ಹಕ್ಕುಗಳ ಪರವಾಗಿ ನಾವು ನಿಲ್ಲುತ್ತೇವೆ” ಎಂದು ಅವರು ಫೇಸ್ ಬುಕ್ ಲೈವ್ ನಲ್ಲಿ ಹೇಳಿದ್ದರು. ಆದರೆ ಬಂಧನಕ್ಕೆ ಹೆದರುವುದಿಲ್ಲ ಎಂದಿದ್ದ ದಂಪತಿ ಆಸ್ಪತ್ರೆಯಿಂದ ಪರಾರಿಯಾಗಿದ್ದರು.

ತಮ್ಮ ರೆಸ್ಟೊರೆಂಟ್ ನಲ್ಲಿ ಹಲಾಲ್ ಅಲ್ಲದ ಆಹಾರವನ್ನು ನೀಡಿದ್ದಕ್ಕಾಗಿ ಜಿಹಾದಿಗಳ ಗುಂಪೊಂದು ತಮ್ಮನ್ನು ಥಳಿಸಿದೆ ಎಂಬುದು ದಂಪತಿಗಳ ಸುಳ್ಳು ಪ್ರಚಾರವಾಗಿತ್ತು.
ಗಂಭೀರ ಕೋಮು ದ್ವೇಷದ ಅಪಪ್ರಚಾರ ನಡೆಸಿದ್ದರೂ ದಂಪತಿ ವಿರುದ್ಧ ಪ್ರಕರಣ ದಾಖಲಿಸದಿರುವುದು ತೀವ್ರ ಚರ್ಚೆಗೆ ಕಾರಣವಾಗಿತ್ತು. ನಂತರ ಪೊಲೀಸರು ಕೋಮು ದ್ವೇಷದ ಅಪಪ್ರಚಾರ ನಡೆಸಿರುವ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಆರಂಭದಲ್ಲಿ ಪೊಲೀಸರು ಹಲ್ಲೆ ಪ್ರಕರಣದಲ್ಲಿ ಮಾತ್ರ ಪ್ರಕರಣ ದಾಖಲಿಸಿದ್ದರು.

Join Whatsapp
Exit mobile version