ಸಿಪಿಐ (ಎಂ-ಎಲ್) ಪಕ್ಷದ ಎಲ್ಲಾ ಹುದ್ದೆಗೆ ರಾಜೀನಾಮೆ ನೀಡಿದ ಕವಿತಾ ಕೃಷ್ಣನ್

Prasthutha|

ನವದೆಹಲಿ: ಕಮ್ಯುನಿಸ್ಟ್ ಪಾರ್ಟ್ ಆಫ್ ಇಂಡಿಯಾ ( ಮಾರ್ಕ್ಸ್’ವಾದಿ – ಲೆನಿನಿಸ್ಟ್) ಪಕ್ಷದ ಎಲ್ಲಾ ಹುದ್ದೆ ಮತ್ತು ಜವಾಬ್ದಾರಿಗಳನ್ನು ತೊರೆಯುವುದಾಗಿ ಕವಿತಾ ಕೃಷ್ಣನ್ ತಿಳಿಸಿದ್ದಾರೆ.

- Advertisement -

ಕವಿತಾ ಕೃಷ್ಣನ್ ಅವರು ಸಿಪಿಐ (ಎಂಎಲ್) ನ ಪಾಲಿಟ್ ಬ್ಯೂರೋ ಸದಸ್ಯರಾಗಿದ್ದರು ಮತ್ತು ಎರಡು ದಶಕಗಳಿಂದ ಕೇಂದ್ರ ಸಮಿತಿಯ ಸದಸ್ಯರಾಗಿದ್ದರು.

ಈ ಕುರಿತು ತನ್ನ ಸಾಮಾಜಿಕ ಖಾತೆಯಲ್ಲಿ ಪ್ರಯಿಕ್ರಿಯಿಸಿರುವ ಕವಿತಾ ಕೃಷ್ಣನ್, ತನ್ನನ್ನು ಸಿಪಿಐ (ಎಂಎಲ್) ಪಕ್ಷದ ಎಲ್ಲಾ ಹುದ್ದೆಗಳಿಂದ ತೆರವುಗೊಳಿಸುವಂತೆ ವಿನಂತಿಸಿದ್ದೇನೆ ಎಂದು ತಿಳಿಸಿದರು.

- Advertisement -

ಹಿಂದಿನ ಸೋವಿಯತ್ ಒಕ್ಕೂಟ, ಅದರ ಮುಖ್ಯಸ್ಥ ಜೋಸೆಫ್ ಸ್ಟಾಲಿನ್ ಮತ್ತು ಚೀನಾದ ಆಡಳಿತಗಳನ್ನು ವಿಫಲ ಸಮಾಜವಾದಗಳು ಎಂಬುವುದರ ಕುರಿತು ಚರ್ಚಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ತನ್ನ ಪೋಸ್ಟ್’ನಲ್ಲಿ ತಿಳಿಸಿದ್ದಾರೆ. ಇವರು ಜಗತ್ತಿನ ಅತ್ಯಂತ ಕೆಟ್ಟ ನಿರಂಕುಶಾಧಿಕಾಶಾಧಿಕಾರಿಗಳು ತಿಳಿಸಿದರು.

ಈ ಹಿಂದೆ ಸಾಮಾಜಿಕ ಜಾಲತಾಣಗಳ ಮೂಲಕ ಕೃಷ್ಣನ್ ಅವರು ಚೀನಾ ಮತ್ತು ಯು.ಎಸ್.ಎಸ್.ಆರ್ ಅನ್ನು ಟೀಕಿಸಿದ್ದರು. ಅಲ್ಲದೆ ಜೂನ್ 26 ರಂದು ಚೀನಾದ ವಾಗ್ದಾಳಿ ನಡೆಸಿದ್ದರು.

Join Whatsapp
Exit mobile version