ಸೆ.11ರಿಂದ ಬೆಂಗಳೂರಿನಿಂದ ಹಾಂಕಾಂಗ್ ಗೆ ನೇರ ಸಂಪರ್ಕ ಕಲ್ಪಿಸುವ ವಿಮಾನ ಸೇವೆ ಪ್ರಾರಂಭ

Prasthutha|

ಬೆಂಗಳೂರು: ಹಾಂಕಾಂಗ್ ನೊಂದಿಗೆ ಉತ್ತಮ ವ್ಯಾವಹಾರಿಕ ಬಾಂಧವ್ಯ ಹೊಂದುವ ಉದ್ದೇಶದಿಂದ ಇದೇ ಅಕ್ಟೋಬರ್ 11ರಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾಂಕಾಂಗ್ ಗೆ ನೇರ ವಿಮಾನ ಸಂಪರ್ಕ ಪ್ರಾರಂಭಿಸಲಾಗುತ್ತಿದ್ದು, ಕ್ಯಾಥೆ ಪೆಸಿಫಿಕ್ ವಿಮಾನವು ಹಾರಾಟ ನಡೆಸಲಿದೆ.

- Advertisement -

ಬಿಐಎಎಲ್ ನ ಮುಖ್ಯ ಕಾರ್ಯತಂತ್ರ ಅಧಿಕಾರಿ ಸತ್ಯಕಿ ರಘುನಾಥ್, ಬೆಂಗಳೂರು ವಿಮಾನ ನಿಲ್ದಾಣವೂ ದೇಶದ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ವಿಶ್ವದ 8 ಪತಿಷ್ಠಿತ ವಿಮಾನ ಸಂಸ್ಥೆಗಳು ಬೆಂಗಳೂರು ವಿಮಾನ ನಿಲ್ದಾಣವನ್ನು ದಕ್ಷಿಣ ಭಾರತದ ಗೇಟ್ ವೇ ಎಂದೇ ಪರಿಗಣಿಸಿವೆ. ಇದರ ಹೆಮ್ಮೆಯ ಭಾಗವಾಗಿ ಇದೀಗ ಹಾಂಕಾಂಗ್ ಗೆ ನೇರವಾಗಿ ವಿಮಾನ ಹಾರಟವನ್ನು ಪ್ರಾರಂಭಿಸುತ್ತಿರುವುದು ಖುಷಿ ನೀಡಿದೆ ಎಂದು ತಿಳಿಸಿದ್ದಾರೆ.

ಅಕ್ಟೋಬರ್ 11 ರಿಂದ ಕ್ಯಾಥೆ ಪೆಸಿಫಿಕ್ ನ ಬೋಯಿಂಗ್ 777-300 ಎರಡು ವಿಮಾನವು ನಾನ್ ಸ್ಟಾಪ್ ಹಾರಟ ನಡೆಸಲಿದೆ. ಈ ವಿಮಾನದಲ್ಲಿ ಮೂರು ಕ್ಯಾಬಿನ್ ಗಳಿದ್ದು ಎಕನಾಮಿಕ್, ಪ್ರೀಮಿಯಂ ಎಕನಾಮಿಕ್ ಹಾಗೂ ಬ್ಯುಸಿನೆಸ್ ಕ್ಲಾಸ್ ಇರಲಿದೆ. ಇದುವರೆಗೂ ಮುಂಬೈ ಹಾಗೂ ದೆಹಲಿಯಿಂದ ಮಾತ್ರ ಹಾಂಕಾಂಗ್ ಗೆ ನೇರವಾಗಿ ವಿಮಾನ ಸೌಲಭ್ಯವಿತ್ತು. ದಕ್ಷಿಣ ಭಾರತದ ಜನರು ಹಾಂಕಾಂಗ್ ಗೆ ತೆರಳಲು ದೆಹಲಿಯಲ್ಲಿ ಇಂಟರ್ ಚೇಂಜ್ ಮಾಡಬೇಕಾಗಿತ್ತು. ಆದರೀಗ ದಕ್ಷಿಣ ಭಾರತದ ಜನರಿಗಾಗಿಯೇ ಬೆಂಗಳೂರಿನಲ್ಲಿ ನೇರ ಸಂಪರ್ಕ ಕಲ್ಪಿಸುವ ವಿಮಾನದ ಹಾರಟವನ್ನು ಪ್ರಾರಂಭಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ವಿವರಿಸಿದರು.

Join Whatsapp
Exit mobile version