ಕೊಡಗು: ಚೆಟ್ಟಳ್ಳಿ ಸಮೀಪ ಕತ್ತಲೆಕಾಡು ತಿರುವಿನಲ್ಲಿ ಸಂಭವಿಸಿದ ಸ್ಕೂಲ್ ವ್ಯಾನ್ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದ್ದು, ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಕ್ಕಂದೂರು ನಿವಾಸಿ ಕೂಲಿ ಕಾರ್ಮಿಕ ಲಿತೀಶ್ ಪೂಜಾರಿ (22) ಮೃತ ದುರ್ದೈವಿ. ಮೂರನೇ ಮೈಲ್ ನಿವಾಸಿ ಬಿ.ಎನ್.ಕೋಟಿ (60) ಗಾಯಗೊಂಡಿರುವ ಕಾರ್ಮಿಕರಾಗಿದ್ದಾರೆ. ಇಂದು ಬೆಳಗ್ಗೆ ಕೂಲಿ ಕೆಲಸಕ್ಕೆಂದು ಸಿದ್ದಾಪುರಕ್ಕೆ ತೆರಳುತ್ತಿದ್ದ ಸಂದರ್ಭ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿತ್ತು.