Home ಕರಾವಳಿ ಕಾರ್ಕಳ: ಕೆಲಸದ ಒತ್ತಡದಿಂದ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ

ಕಾರ್ಕಳ: ಕೆಲಸದ ಒತ್ತಡದಿಂದ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ

ಕಾರ್ಕಳ: ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಪಂಚಾಯತ್ ವಸತಿಗೃಹದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಕುಕ್ಕಂದೂರು ಬಳಿ ನಡೆದಿದೆ.


ಕಾರ್ಕಳ ತಾಲೂಕು ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಸುಶ್ಮಿತಾ (26) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ.


ಕಾರ್ಕಳದ ಪೆರ್ವಾಜೆಯವರಾದ ಅವಿವಾಹಿತೆ ಸುಶ್ಮಿತಾ ಹುಡ್ಕೋ ಭಾನುವಾರ ಕಾಲನಿಯ ಮನೆಯಲ್ಲಿ ತಂದೆ-ತಾಯಿ ಸಹೋದರನೊಂದಿಗೆ ವಾಸವಾಗಿದ್ದು, ಕಳೆದ ಆರು ವರ್ಷಗಳಿಂದ ತಾಲೂಕು ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ಕರ್ತವ್ಯದ ಒತ್ತಡದಿಂದ ಇದ್ದು, ಈ ಬಗ್ಗೆ ವೈದ್ಯರಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು ಎಂದು ತಿಳಿದುಬಂದಿದೆ.


ಸುಶ್ಮಿತಾ ಜು.24ರ ರಾತ್ರಿ ಊಟ ಮಾಡಿ ಮಲಗಿದ್ದು, 11ಗಂಟೆ ಸುಮಾರಿಗೆ ಕಾಣಿಸದೇ ಇದ್ದಾಗ ಸ್ನೇಹಿತರು ಹುಡುಕಾಡಿದಾಗ ವಸತಿಗೃಹದ ಬಾವಿ ಕಟ್ಟೆಯಲ್ಲಿ ಮೊಬೈಲ್ ಪತ್ತೆಯಾಗಿತ್ತು. ಬಳಿಕ ಅಗ್ನಿಶಾಮಕ ದಳದವರು ಬಂದು ಹುಡುಕಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.


ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version