ಶುಕ್ರವಾರದ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಸಾಥ್ ನೀಡಲು ಕನ್ನಡ ಸೇನೆ ಆಗ್ರಹ                                      

Prasthutha|

ಬಣಕಲ್ : ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಸಾಥ್ ನೀಡಲು ಕನ್ನಡ ಸೇನೆ ಆಗ್ರಹಿಸಿದೆ.

- Advertisement -

ಈ ಕುರಿತು ಕೊಟ್ಟಿಗೆಹಾರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಹೊರಟ್ಟಿ ರಘು, ಮಲೆನಾಡು ಭಾಗದಲ್ಲಿ ನೀರಿನ ಕೊರತೆಯಾಗಿದೆ. ಕಾವೇರಿ, ಹೇಮಾವತಿ, ಮತ್ತಿತರ ನದಿಗಳು ಬತ್ತಿ ನೀರಿಗೆ ಹಾಹಾಕಾರ ಆಗಲಿದೆ. ಆದುದರಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಸೆಪ್ಟಂಬರ್ 29 ರಂದು ವಿವಿಧ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ ಎಂದು ತಿಳಿಸಿದ್ದಾರೆ.

 ಕರ್ನಾಟಕದಲ್ಲಿ ಮುಂದೆ ನೀರಿಗೆ ಬರ ಉಂಟಾಗಲಿದೆ. ನೆಲಜಲ ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದರಿಂದ ಅದನ್ನು ಶೀಘ್ರವೇ ನಿಲ್ಲಿಸಿ ರಾಜ್ಯಕ್ಕೆ ನ್ಯಾಯ ಒದಗಿಸಬೇಕು. ಮಳೆಯು ಮಧ್ಯಂತರ ಮುಗಿದು ಕೊನೆ ಹಂತಕ್ಕೆ ಬಂದಿದ್ದೇವೆ. ಆದರೂ ಮರೆತಿಲ್ಲ. ಈಗಿರುವಾಗ ನಮಗೆ ಕುಡಿಯಲು ನೀರು ಇಲ್ಲದ ಸಮಯದಲ್ಲಿ ಬೇರೆ ರಾಜ್ಯಕ್ಕೆ ನೀರು ಬಿಟ್ಟರೆ ರಾಜ್ಯ ಸಂಕಷ್ಟಕ್ಕೆ ಗುರಿಯಾಗಬಹುದು. ವಿವಿಧ ಸಂಘಟನೆಗಳು ಇದೇ 29ರಂದು ನಡೆಯುವ ನೀರಿನ ಹೋರಾಟಕ್ಕೆ ಹಾಗೂ ಬಂದ್ ಗೆ  ವಿವಿಧ ಸಂಘಟನೆಗಳು ಕೈಜೋಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಬೇಕು. ಕೊಟ್ಟಿಗೆಹಾರ, ಬಣಕಲ್, ಬಾಳೂರು ಹೋಬಳಿಯ ಎಲ್ಲಾ ಭಾಗದ ವಿವಿಧ ಸಂಘಟನೆಗಳು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಹೋರಾಟ ಉತ್ತಮ ರೀತಿಯಲ್ಲಿ ಶಾಂತಿಯುತವಾಗಿ ನಡೆಯಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

- Advertisement -

ಸುದ್ದಿಗೋಷ್ಟಿಯಲ್ಲಿ ಕರವೇ ಬಣಕಲ್ ಹೋಬಳಿ ಅಧ್ಯಕ್ಷ  ಯಾಕೂಬ್, ಅಜೀಜ್, ಫಾರೂಕ್ ಮತ್ತಿತರರು ಇದ್ದರು.



Join Whatsapp