Home ಕರಾವಳಿ ಕಾಣಿಯೂರು ಹಲ್ಲೆ ಪ್ರಕರಣ: ಸಂತ್ರಸ್ತರನ್ನು ಭೇಟಿಯಾದ ಶಾಸಕ ಯು.ಟಿ ಖಾದರ್

ಕಾಣಿಯೂರು ಹಲ್ಲೆ ಪ್ರಕರಣ: ಸಂತ್ರಸ್ತರನ್ನು ಭೇಟಿಯಾದ ಶಾಸಕ ಯು.ಟಿ ಖಾದರ್

ಮಂಗಳೂರು: ಕಾಣಿಯೂರು ಬಳಿ ಸಂಘ ಪರಿವಾರದ ಗುಂಪಿನಿಂದ ಮಾರಣಾಂತಿಕ ಹಲ್ಲೆಗೊಳಗಾದ ಇಬ್ಬರು ಜವಳಿ ವ್ಯಾಪಾರಿಗಳನ್ನು ಶಾಸಕ ಯು.ಟಿ. ಖಾದರ್ ಮಂಗಳವಾರ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ.


ಬಳಿಕ ಟ್ವೀಟ್ ಮಾಡಿರುವ ಅವರು, ಕಾಣಿಯೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ವ್ಯಾಪಾರಿಗಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದೇನೆ. ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಈಗಾಗಲೇ ಗೃಹ ಸಚಿವರ ಜೊತೆಯಲ್ಲಿ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.


ಕಾಣಿಯೂರು ಬಳಿ ಮಂಗಳೂರು ತಾಲೂಕಿನ ಅಡ್ಡೂರು ನಿವಾಸಿಗಳಾದ ರಮೀಝುದ್ದೀನ್ ಮತ್ತು ರಫೀಕ್ ಎಂಬುವವರು ಜವಳಿ ವ್ಯಾಪಾರಕ್ಕೆ ತೆರಳಿದ್ದಾಗ 50 ಮಂದಿಯ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿತ್ತು. ದುಷ್ಕರ್ಮಿಗಳು ಇಬ್ಬರಿಗೂ 2 ಗಂಟೆಗಳ ಕಾಲ ನಿರಂತರವಾಗಿ ಥಳಿಸಿದ್ದರು ಮತ್ತು ಇಬ್ಬರ ಮೇಲೆ ಬೈಕ್ ಹತ್ತಿಸಿ ಕ್ರೂರವಾಗಿ ವರ್ತಿಸಿದ್ದರು. ಮಾರಣಾಂತಿಕವಾಗಿ ಗಾಯಗೊಂಡ ಅವರಿಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Join Whatsapp
Exit mobile version