Home ಟಾಪ್ ಸುದ್ದಿಗಳು ಅಪಾರ್ಟ್‌ಮೆಂಟ್‌ಗೆ ರಾಕೆಟ್ ಪಟಾಕಿ ಬಿಟ್ಟ ಕಿಡಿಗೇಡಿ

ಅಪಾರ್ಟ್‌ಮೆಂಟ್‌ಗೆ ರಾಕೆಟ್ ಪಟಾಕಿ ಬಿಟ್ಟ ಕಿಡಿಗೇಡಿ

ಮುಂಬೈ: ಯುವಕನೋರ್ವ ದೀಪಾವಳಿ ಹಬ್ಬದಂದು ಅಪಾರ್ಟ್‌ಮೆಂಟ್‌ಗೆ ರಾಕೆಟ್ ಹಾರಿಸಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಹಾಸ್ ನಗರ ಪಟ್ಟಣದಲ್ಲಿ ನಡೆದಿದೆ.

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ವ್ಯಕ್ತಿ ಅಪಾರ್ಟ್‌ಮೆಂಟ್‌ ಕಟ್ಟಡದ ಕೆಳಗೆ ನಿಂತುಕೊಂಡು ಬಾಕ್ಸ್ ನಲ್ಲಿದ್ದ ರಾಕೆಟ್ ಗಳನ್ನು ಒಂದರ ನಂತರ ಒಂದರಂತೆ ಹಾರಿಸುತ್ತಾನೆ. ಈ ವೇಳೆ ರಾಕೆಟ್ ಗಳು ಅಪಾರ್ಟ್‌ಮೆಂಟ್‌ ಮಹಡಿಗಳಿಗೆ, ಬಾಲ್ಕನಿ ಮತ್ತು ಕಿಟಕಿಗಳಿಗೆ ಹೋಗುವುದನ್ನು ಕಾಣಬಹುದಾಗಿದೆ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ರಾಕೆಟ್ ಹಾರಿಸಿದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಮತ್ತು ಆತನ ವಿರುದ್ಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

Join Whatsapp
Exit mobile version