Home Uncategorized ಸ್ವೀಡನ್ ನ ಪ್ರಥಮ ಮಹಿಳಾ ಪ್ರಧಾನಿ ಮ್ಯಾಗ್ಡಲೀನಾ ಅಂಡರ್ಸನ್ ಅಧಿಕಾರ ವಹಿಸಿದ ಕೆಲವೇ ಘಂಟೆಗಳಲ್ಲಿ...

ಸ್ವೀಡನ್ ನ ಪ್ರಥಮ ಮಹಿಳಾ ಪ್ರಧಾನಿ ಮ್ಯಾಗ್ಡಲೀನಾ ಅಂಡರ್ಸನ್ ಅಧಿಕಾರ ವಹಿಸಿದ ಕೆಲವೇ ಘಂಟೆಗಳಲ್ಲಿ ರಾಜೀನಾಮೆ!

ಕೋಪನ್ ಹೇಗ್: ಸ್ವೀಡನ್ ನ ಪ್ರಥಮ ಮಹಿಳಾ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಚರಿತ್ರೆ ನಿರ್ಮಿಸಿದ್ದ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ಮ್ಯಾಗ್ಡಲೀನಾ ಅಂಡರ್ಸನ್ ಕೆಲವೇ ಗಂಟೆಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿದೆ. ಮೈತ್ರಿ ಸರ್ಕಾರಕ್ಕೆ ಗ್ರೀನ್ ಪಾರ್ಟಿ ನೀಡಿದ್ದ ಬೆಂಬಲ ಹಿಂಪಡೆದ ಪರಿಣಾಮ ಸಂಸತ್ ನಲ್ಲಿ ಮಂಡಿಸಿದ್ದ ಬಜೆಟ್ ಗೆ ನಿರ್ಣಾಯಕ ಮತಗಳು ಬೀಳದೆ ಸೋಲುಂಟಾಗಿತ್ತು. ಇದರ ಪರಿಣಾಮ ಮ್ಯಾಗ್ಡಲೀನಾ ಅವರು ಪ್ರಧಾನಿಯಾಗಿ ಅಧಿಕಾರ ಅಧಿಕಾರ ತೊರೆಯುವಂತಾಗಿದೆ.

ನನಗೆ ಇದು ಗೌರವದ ಪ್ರಶ್ನೆಯಾಗಿದೆ. ಆದರೆ ನಾನು ಅದರ ನ್ಯಾಯಸಮ್ಮತತೆಯನ್ನು ಪ್ರಶ್ನಿಸಲು ಆಧಾರ ಹೊಂದಿರುವ ಸರ್ಕಾರವನ್ನು ಮುನ್ನಡೆಸಲು ಬಯಸುವುದಿಲ್ಲ ಎಂದು ಮ್ಯಾಗ್ಡಲೀನಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಾನು ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ಸರ್ಕಾರವನ್ನು ರಚಿಸಲಿದ್ದೇನೆ, ಶೀಘ್ರದಲ್ಲಿಯೇ ಪ್ರಧಾನಿಯಾಗಿ ಸಂಸತ್ ಪ್ರವೇಶಿಸುವುದಾಗಿ ಮ್ಯಾಗ್ಡಲೀನಾ ಅವರು ಸ್ಪೀಕರ್ ಗೆ ತಿಳಿಸಿರುವುದಾಗಿ ಮೂಲಗಳು ವಿವರಿಸಿದೆ.

ಸರ್ಕಾರವನ್ನು ತೊರೆಯಬೇಕಾದ ಸಂದರ್ಭ ಬಂದಾಗ ಮೈತ್ರಿ ಸರ್ಕಾರ ರಾಜೀನಾಮೆ ಕೊಡಲೇಬೇಕಾಗುತ್ತದೆ. ಆದರೆ ಸಂಸದೀಯ ಪರಿಸ್ಥಿತಿಗಳು ಬದಲಾಗುವುದಿಲ್ಲ, ನಾವು ಮತ್ತೊಮ್ಮೆ ಪ್ರಯತ್ನಿಸಬಹುದಾಗಿದೆ ಎಂದು ಮ್ಯಾಗ್ಡಲೀನಾ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

Join Whatsapp
Exit mobile version