Home ಕರಾವಳಿ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ

ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ

ಬೆಂಗಳೂರು: ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇದರ ಸೇವಾ ಘಟಕದ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಮತ್ತು ಸಭಾ ಕಾರ್ಯಕ್ರಮ ನಿರ್ವಹಣೆಯ ಪ್ರಾಯೋಗಿಕ ತರಬೇತಿಯನ್ನು ನಡೆಸಲಾಯಿತು.

ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ರಾ.ಸೇ.ಯೋ ಘಟಕದ ಯೋಜನಾಧಿಕಾರಿ ಬಿ.ಎ ಶಮೀವುಲ್ಲಾ  ಓರಿಯಂಟೇಶನ್ ಕಾರ್ಯಕ್ರಮವನ್ನು ನಡೆಸಿಕೊಟ್ಟು ಸೇವಾ ಮನೋಭಾವನೆಯೊಂದಿಗೆ ಶಿಸ್ತುಬದ್ಧ ಜೀವನ ವ್ಯಕ್ತಿತ್ವ ವಿಕಸಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಳ್ತಂಗಡಿ ಮಾರುತಿ ಸುಜುಕಿ ಭಾರತ್ ಶೋ ರೂಮ್ ನ ಮಾರ್ಕೆಟಿಂಗ್ ವಿಭಾಗದ ಟೀಮ್ ಲೀಡರ್ ಅನೂಪ್ ಬಂಗೇರ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಸೇವಾ ಘಟಕದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿ ‌ವಿದ್ಯಾರ್ಥಿಗಳೇ ನಿರ್ವಹಿಸಿದ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಘಟಕದ ಸಂಯೋಜಕರಾದ ಉಪನ್ಯಾಸಕಿ ಹೇಮಾವತಿ.ಕೆ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಸೇವಾ ಘಟಕದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಶಿಸ್ತು ಮತ್ತು ಬದ್ಧತೆಯ ಜೀವನಕ್ಕೆ ಅಡಿಪಾಯವನ್ನು ಹಾಕಿಕೊಳ್ಳಬೇಕೆಂದು ತಿಳಿಸಿದರು.

ಘಟಕದ ಕಾರ್ಯದರ್ಶಿಗಳಾದ ಪ್ರೇಮನಾಥ್ ಮತ್ತು ಜ್ಯೋತಿ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪ್ರಣಮ್ಯ ಮತ್ತು ಆಯಿಷತ್ ಅಸ್ವಿನಾ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.

ಸುದೇಶ್ ಹಾಗೂ ರಕ್ಷಿತ್  ಅತಿಥಿಗಳನ್ನು ಪರಿಚಯಿಸಿದರು‌. ವಿರೇಶ್ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಪೂಜಾ ಸ್ವಾಗತಿಸಿ ರಶ್ಮಿಯಾ ಧನ್ಯವಾದವನ್ನಿತ್ತರು. ರಕ್ಷಾ ಕಾರ್ಯಕ್ರಮ ನಿರೂಪಿಸಿದರು.

Join Whatsapp
Exit mobile version