Home ಟಾಪ್ ಸುದ್ದಿಗಳು ಕಾಶ್ಮೀರದಲ್ಲಿ ಪತ್ರಕರ್ತರಿಗೆ ಬೆದರಿಕೆ| ತನಿಖೆಗೆ ವಿಶೇಷ ಸಮಿತಿ ರಚಿಸಿದ ಪ್ರೆಸ್ ಕೌನ್ಸಿಲ್!

ಕಾಶ್ಮೀರದಲ್ಲಿ ಪತ್ರಕರ್ತರಿಗೆ ಬೆದರಿಕೆ| ತನಿಖೆಗೆ ವಿಶೇಷ ಸಮಿತಿ ರಚಿಸಿದ ಪ್ರೆಸ್ ಕೌನ್ಸಿಲ್!

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಮೂಲದ ಪತ್ರಕರ್ತರಿಗೆ ಆಡಳಿತ ವರ್ಗ ಬೆದರಿಕೆ ಹಾಕುತ್ತಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ವಿಶೇಷ ಸಮಿತಿಯನ್ನು ರಚಿಸಿದೆ.

ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹಂಚಿಕೊಂಡ ಕಳವಳಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಪಿಸಿಐ ವಿಶೇಷ ಸಮಿತಿಯನ್ನು ರಚಿಸಿದೆ. ಪ್ರಕಾಶ್ ದುಬೆ ಸಮಿತಿಯ ಸಂಚಾಲಕ.

ದೈನಿಕ್ ಭಾಸ್ಕರ್ ನ ಗ್ರೂಪ್ ಎಡಿಟರ್, ಪ್ರಮುಖ ಹಿಂದಿ ದಿನಪತ್ರಿಕೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಕರ್ತ ಗುರ್ ಬೀರ್ ಸಿಂಗ್, ಜನ್ ಮೋರ್ಚಾ ಗ್ರೂಪ್ ಎಡಿಟರ್ ಡಾ. ಸುಮನ್ ಗುಪ್ತ ಇತರ ಸದಸ್ಯರು. ಸಮಿತಿಯು ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಲಿದೆ ಎಂದು ಪಿಸಿಐ ಸ್ಪಷ್ಟಪಡಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಆಡಳಿತ ವರ್ಗ ಪತ್ರಕರ್ತರಿಗೆ ಬೆದರಿಕೆ ಹಾಕುತ್ತಿದೆ ಎಂದು ಕೆಲವು ದಿನಗಳ ಹಿಂದೆ ಮೆಹಬೂಬಾ ಮುಫ್ತಿ ಪಿಸಿಐಗೆ ಪತ್ರ ಬರೆದು ಕಳವಳವನ್ನು ಹಂಚಿಕೊಂಡಿದ್ದರು.

Join Whatsapp
Exit mobile version