Home ಟಾಪ್ ಸುದ್ದಿಗಳು ಜೆಡಿಎಸ್ ಮುಖಂಡ ಸುಹೇಲ್ ನವಾಝ್ ಎಎಪಿ ಸೇರ್ಪಡೆ

ಜೆಡಿಎಸ್ ಮುಖಂಡ ಸುಹೇಲ್ ನವಾಝ್ ಎಎಪಿ ಸೇರ್ಪಡೆ

ನವದೆಹಲಿ: ಕೋಲಾರದ ಜೆಡಿಎಸ್ ಮುಖಂಡ ಸುಹೇಲ್ ದಿಲ್ ನವಾಝ್ ಅವರು ಆಮ್ ಆದ್ಮಿ ಪಾರ್ಟಿಯ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆಯವರ ಸಮ್ಮುಖದಲ್ಲಿ ದೆಹಲಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ವೇಳೆ ಸುಹೆಲ್ ದಿಲ್ ನವಾಝ್ ಕುರಿತು ಮಾತನಾಡಿದ ದಿಲೀಪ್ ಪಾಂಡೆ, “ಸುಹೆಲ್ರವರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿದವರು. ಇವರ ತಂದೆ ಕೋಲಾರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಬ್ದುಲ್ ಲತೀಫ್ ರವರು ʻಕರ್ನಾಟಕದ ರೇಷ್ಮೆ ಉದ್ಯಮದ ಪಿತಾಮಹʼ ಎಂದೇ ಪ್ರಸಿದ್ಧರಾಗಿದ್ದರು. ಸುಹೆಲ್ ಇಂಗ್ಲೆಂಡ್ನಲ್ಲಿ ಎಂಎ, ಎಲ್ ಎಲ್ ಬಿ, ಐಎಲ್ಟಿ ಶಿಕ್ಷಣ ಪಡೆದಿದ್ದಾರೆ. ಕಿರಿಯ ವಯಸ್ಸಿನಿಂದಲೂ ರಾಜಕೀಯ ಹೋರಾಟಗಳಲ್ಲಿ ಆಸಕ್ತಿ ಹೊಂದಿದ್ದಾರೆ. ವಿದ್ಯಾರ್ಥಿ ನಾಯಕರಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ ಅನುಭವ ಹೊಂದಿದ್ದಾರೆ” ಎಂದು ಪರಿಚಯಿಸಿದರು.

“ಜೆ.ಎಚ್.ಪಟೇಲ್ರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಹೆಲ್ರವರು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ (ಪಿಡಿಎಸ್) ವೆಚ್ಚ ಕಡಿತ ಹಾಗೂ ಇನ್ನಿತರ ಬದಲಾವಣೆಗಳನ್ನು ತಂದಿದ್ದರು. ಕೋಲಾರದ ರೈಲ್ವೆ ಸಂಪರ್ಕ ಅಭಿವೃದ್ಧಿಯಲ್ಲಿ ಸುಹೆಲ್ರವರ ಪಾತ್ರ ಮಹತ್ವದ್ದಾಗಿದೆ. ಇಂತಹ ಅನುಭವಿ ವ್ಯಕ್ತಿತ್ವ ಹಾಗೂ ಅಪಾರ ಜನಪರ ಕಾಳಜಿಯುಳ್ಳ ನಾಯಕರು ಜೆಡಿಎಸ್ ತೊರೆದು ಆಮ್ ಆದ್ಮಿ ಪಾರ್ಟಿ ಸೇರುತ್ತಿರುವುದು ಸಂತಸದ ವಿಚಾರ” ಎಂದು ದಿಲೀಪ್ ಪಾಂಡೆ ಹೇಳಿದರು.

ಸುಹೆಲ್ ದಿಲ್ ನವಾಜ್ರವರ ಜೊತೆ ಅವರ 25ಕ್ಕೂ ಹೆಚ್ಚು ಬೆಂಬಲಿಗರು ಆಮ್ ಆದ್ಮಿ ಪಾರ್ಟಿ ಸೇರಿದ್ದಾರೆ. ಸೇರ್ಪಡೆ ಪತ್ರಿಕಾಗೋಷ್ಠಿಯಲ್ಲಿ ಕೋಲಾರ ಜಿಲ್ಲಾ ಉಸ್ತುವಾರಿ ರವಿಶಂಕರ್ ಸಹ ಹಾಜರಿದ್ದರು

Join Whatsapp
Exit mobile version