Home ಟಾಪ್ ಸುದ್ದಿಗಳು ಪಠ್ಯದಿಂದ ಬಾಬರಿ ಮಸೀದಿ, ರಥಯಾತ್ರೆ ವಿಷಯಗಳಿಗೆ ಕೊಕ್: ಸಮರ್ಥಿಸಿದ NCERT ನಿರ್ದೇಶಕ

ಪಠ್ಯದಿಂದ ಬಾಬರಿ ಮಸೀದಿ, ರಥಯಾತ್ರೆ ವಿಷಯಗಳಿಗೆ ಕೊಕ್: ಸಮರ್ಥಿಸಿದ NCERT ನಿರ್ದೇಶಕ

ನವದೆಹಲಿ: ದೇಶದ ಉನ್ನತ ಶಿಕ್ಷಣ ಸಂಸ್ಥೆ NCERT ಪಠ್ಯಪುಸ್ತಕಗಳಿಂದ ಬಾಬರಿ ಮಸೀದಿ ಧ್ವಂಸ ಮತ್ತು ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ನೇತೃತ್ವದ ರಾಮ ರಥ ಯಾತ್ರೆಯ ಉಲ್ಲೇಖಗಳನ್ನು ತೆಗೆದುಹಾಕಲಾಗಿದೆ. ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಎನ್‌ಸಿಇಆರ್‌ಟಿಯ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ, ದ್ವೇಷ ಮತ್ತು ಹಿಂಸಾಚಾರ ಶಿಕ್ಷಣದ ವಿಷಯಗಳಲ್ಲ, ಶಾಲಾ ಪಠ್ಯಪುಸ್ತಕಗಳಲ್ಲಿ ಅವುಗಳ ಬಗ್ಗೆ ಏಕೆ ಕಲಿಸಬೇಕು ಎಂದು ಪ್ರಶ್ನಿಸಿದ್ದಾರೆ.

ನಾವು ನಮ್ಮ ವಿದ್ಯಾರ್ಥಿಗಳನ್ನು ಆಕ್ರಮಣಕಾರಿಯಾಗುವಂತೆ ಕಲಿಸಬೇಕೇ, ಸಮಾಜದಲ್ಲಿ ದ್ವೇಷವನ್ನು ಸೃಷ್ಟಿಸಬೇಕೇ ಅಥವಾ ದ್ವೇಷಕ್ಕೆ ಬಲಿಯಾಗಬೇಕೇ? ಇದು ಶಿಕ್ಷಣದ ಉದ್ದೇಶವೇ? ಚಿಕ್ಕ ಮಕ್ಕಳಿಗೆ ನಾವು ಗಲಭೆಗಳ ಬಗ್ಗೆ ಕಲಿಸಬೇಕೇ? ಅವರು ಬೆಳೆದಾಗ, ಅವರು ಅದರ ಬಗ್ಗೆ ಕಲಿಯಬಹುದು. ಆದರೆ ಶಾಲೆಯ ಪಠ್ಯಪುಸ್ತಕಗಳು ಏಕೆ ಎಂದು ಪ್ರಶ್ನಿಸಿದ್ದಾರೆ. ಅವರು ಬೆಳೆದಾಗ ಏನಾಯಿತು ಮತ್ತು ಏಕೆ ಸಂಭವಿಸಿತು ಎಂಬುದನ್ನು ಅವರು ಅರ್ಥಮಾಡಿಕೊಳ್ಳಲಿ. ಬಾಲ್ಯದಲ್ಲಿ ಅವುಗಳ ಬಗ್ಗೆ ಕಲಿಕೆ ಅಪ್ರಸ್ತುತವಾಗಿದೆ ಎಂದು ಸಕ್ಲಾನಿ ಪ್ರತಿಪಾದಿಸಿದ್ದಾರೆ‌.

ಹೊಸ ಪರಿಷ್ಕೃತ NCERT 12 ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕವು ಬಾಬರಿ ಮಸೀದಿಯ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಅದನ್ನು ಮೂರು-ಗುಮ್ಮಟ ರಚನೆ ಎಂದು ಉಲ್ಲೇಖಿಸುತ್ತದೆ. ಅಲ್ಲದೆ, ಅಯೋಧ್ಯೆ ವಿಭಾಗವನ್ನು ನಾಲ್ಕರಿಂದ ಎರಡು ಪುಟಗಳಿಗೆ ಟ್ರಿಮ್ ಮಾಡಲಾಗಿದೆ, ಹಿಂದಿನ ಆವೃತ್ತಿಯಿಂದ ವಿವರಗಳನ್ನು ಅಳಿಸಲಾಗಿದೆ.

Join Whatsapp
Exit mobile version