Home ಟಾಪ್ ಸುದ್ದಿಗಳು ಇಸ್ಪೀಟ್ ಆಡುತ್ತಿದ್ದಾಗ ಹೃದಯಾಘಾತದಿಂದ ಜೆಡಿಎಸ್ ಮುಖಂಡ ಮೃತ್ಯು

ಇಸ್ಪೀಟ್ ಆಡುತ್ತಿದ್ದಾಗ ಹೃದಯಾಘಾತದಿಂದ ಜೆಡಿಎಸ್ ಮುಖಂಡ ಮೃತ್ಯು

ಮೈಸೂರು: ಜೆಡಿಎಸ್ ಮುಖಂಡರೊಬ್ಬರು ಸ್ನೇಹಿತರ ಜೊತೆ ಇಸ್ಪೀಟ್ ಆಡುತ್ತಿದ್ದಾಗಲೇ ಕುಳಿತಲ್ಲಿಂದ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.

ಮೈಸೂರಿನ ಜೆಡಿಎಸ್ ಮುಖಂಡರಾದ ಆಶ್ವಥ್ ಚಿಯಾ ಮೃತ ವ್ಯಕ್ತಿಯಾಗಿದ್ದಾರೆ. 

ಮೈಸೂರು- ಬೆಂಗಳೂರು ರಸ್ತೆಯ ರಿಕ್ರಿಯೇಶನ್ ಕ್ಲಬ್ ನಲ್ಲಿ ಇಸ್ಪಿಟ್ ಆಡುತ್ತಿದ್ದಾಗ ಘಟನೆ ನಡೆದಿದ್ದು,  ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಅಲ್ಲಿದ್ದ ಸ್ನೇಹಿತರು ಅವರನ್ನು ಆಸ್ಪತ್ರೆಗೆ ಸಾಗಿಸಲಾದರೂ, ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version