Home ಟಾಪ್ ಸುದ್ದಿಗಳು ಟಿ.ಆರ್.ಎಸ್. ನೊಂದಿಗೆ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡುವುದಿಲ್ಲ: ರಾಹುಲ್ ಗಾಂಧಿ

ಟಿ.ಆರ್.ಎಸ್. ನೊಂದಿಗೆ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡುವುದಿಲ್ಲ: ರಾಹುಲ್ ಗಾಂಧಿ

ತೆಲಂಗಾಣ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಟಿ.ಆರ್.ಎಸ್’ನೊಂದಿಗೆ ಯಾವುದೇ ರೀತಿಯಲ್ಲೂ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್’ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷವು ಕೇವಲ ಗಾಳಿಯಲ್ಲಿ ಮಾತ್ರವಿದ್ದು, ಭೂಮಿಯಲ್ಲಿ ಅವರ ಸಾಧನೆ ಶೂನ್ಯ ಎಂದು ತಿಳಿಸಿದ್ದಾರೆ.

ತೆಲಂಗಾಣದ ಕೋತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೆಲಂಗಾಣ ಮುಖ್ಯಮಂತ್ರಿ ರಾಷ್ಟ್ರೀಯ ಪಕ್ಷವನ್ನು ಮುನ್ನಡೆಸುತ್ತಿದ್ದಾರೆಂದು ಭಾವಿಸಿದ್ದಾರೆ. ಅವರು ಅಂತಾರಾಷ್ಟ್ರೀಯ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಎಂದು ಭಾವಿಸುವುದು ಕೂಡ ಸ್ವಾಗತಾರ್ಹ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವ ಪಕ್ಷವಾಗಿದೆ. ನಾವು ಸರ್ವಾಧಿಕಾರವನ್ನು ನಡೆಸುವುದಿಲ್ಲ ಎಂಬುದು ನಮ್ಮ ಡಿಎನ್ಎಯಲ್ಲಿದೆ. ಇತ್ತೀಚೆಗೆ ಪಕ್ಷದ ನೂತನ ಅಧ್ಯಕ್ಷರನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಲಾಗಿದೆ. ಆರೆಸ್ಸೆಸ್, ಬಿಜೆಪಿ, ಟಿಆರ್.ಎಸ್ ಮತ್ತು ಇತರ ರಾಜಕೀಯ ಪಕ್ಷಗಳು ಈ ರೀತಿಯ ಚುನಾವಣೆಯನ್ನು ಯಾವಾಗ ನಡೆಸುತ್ತವೆ ಎಂದು ನಾನು ಆಶ್ಚರ್ಯ ಪಡುತ್ತಿದ್ದೇನೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು.

Join Whatsapp
Exit mobile version