ನನ್ನ ನಿರ್ಧಾರವನ್ನು ಜೆಡಿಎಸ್ ಪ್ರಶ್ನಿಸುವಂತಿಲ್ಲ: ಶಾಸಕ ಶ್ರೀನಿವಾಸಗೌಡ

Prasthutha|

ಕೋಲಾರ: ಈಗಾಗಲೇ ಜೆಡಿಎಸ್ ಪಕ್ಷ ನನ್ನನ್ನು ಉಚ್ಛಾಟನೆ ನಡೆಸಿದ್ದು, ನನ್ನ ನಿರ್ಧಾರವನ್ನು ಆ ಪಕ್ಷದವರು ಪ್ರಶ್ನಿಸುವಂತಿಲ್ಲ ಎಂದು ಕೋಲಾರ ಶಾಸಕ ಶ್ರೀನಿವಾಸಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಏಳು ತಿಂಗಳ ಹಿಂದೆಯೇ ನನ್ನನು ಜೆಡಿಎಸ್ ಉಚ್ಛಾಟನೆ ನಡೆಸಿರುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ನಾನು ಯಾವುದೇ ಪಕ್ಷವನ್ನು ಬೆಂಬಲಿಸಬಹುದು. ಇದರ ಮುಂದುವರಿದ ಭಾಗವಾಗಿ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಚಲಾಯಿಸಿದ್ದೇನೆ ಎಂದು ಶ್ರೀನಿವಾಸಗೌಡ ತಿಳಿಸಿದ್ದಾರೆ.

ಸರ್ವಾಧಿಕಾರಿ ಮನಸ್ಥಿತಿಯ ಕುಮಾರಸ್ವಾಮಿ ಅವರ ವರ್ತನೆ ಸರಿಯಿಲ್ಲ. 2018 ರಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಆದಾಗ ಉದ್ದೇಶಪೂರ್ವಕವಾಗಿ ನನ್ನ ಮಂತ್ರಿ ಸ್ಥಾನವನ್ನು ತಪ್ಪಿಸಿದ್ದಾರೆ. ಹಿರಿಯನಾದ ನನ್ನನ್ನು ಕುಮಾರಸ್ವಾಮಿ ಕಡೆಗಣಿಸಿದ್ದಾರೆ ಎಂದು ಹೆಚ್ಡಿಕೆ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

- Advertisement -

ಈ ಮಧ್ಯೆ ನನ್ನ ನಿವಾಸದ ಎದುರು ಪ್ರತಿಭಟನೆ ನಡೆಸಿದ ಜೆಡಿಎಸ್ ನಾಯಕರಿಗೆ ದೇವರು ಒಳಿತನ್ನು ಮಾಡಲಿ ಎಂದು ಶ್ರೀನಿವಾಸಗೌಡ ಹೇಳಿದರು.

Join Whatsapp
Exit mobile version