ಮಲಯಾಳಂ ನಟ ಸಿದ್ದಿಕ್ ಪುತ್ರ ನಿಧನ: ಮಾಲಿವುಡ್ ಸಂತಾಪ

Prasthutha|

ಕೊಚ್ಚಿ: ಮಲಯಾಳಂ ನಟ ಸಿದ್ದಿಕ್ ಅವರ ಹಿರಿಯ ಪುತ್ರ ರಶೀನ್ (37) ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದು, ಮಾಲಿವುಡ್ ತೀವ್ರ ಸಂತಾಪ ಸೂಚಿಸಿದೆ.

- Advertisement -

ತನ್ನ ಮಗ ರಶೀನ್‌ ವಿಶೇಷ ಚೇತನ ಮಗು ಎಂದು ನಟ ಸಿದ್ದಿಕ್ ಸಂದರ್ಶನವೊಂದರಲ್ಲಿ ಹೇಳಿದ್ದರು. ರಶೀನ್ ಕಳೆದ ಕೆಲ ಸಮಯದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.

ಸಿದ್ದಿಕ್‌‌ ಅವರ ಇನ್ನೋರ್ವ ಪುತ್ರ ಶಾಹಿನ್ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

- Advertisement -

ಮಾಲಿವುಡ್‌ ಚಿತ್ರರಂಗದಲ್ಲಿ ಖ್ಯಾತ ನಟರಾಗಿರುವ ಸಿದ್ದಿಕ್‌ ಅವರ ಪುತ್ರ ವಿಯೋಗಕ್ಕೆ ಮಲಯಾಳಂ ಚಿತ್ರರಂಗ ಕಂಬನಿ ಮಿಡಿದಿದೆ.

Join Whatsapp
Exit mobile version