Home ಟಾಪ್ ಸುದ್ದಿಗಳು ಬಿಜೆಪಿ ಗೆ ತಿರುಗಿ ಬಿದ್ದ ಜನಾರ್ದನ ರೆಡ್ಡಿ; ‘ಕಮಲ’ವನ್ನು ಕೆಣಕಿದ ‘ಕೈ’

ಬಿಜೆಪಿ ಗೆ ತಿರುಗಿ ಬಿದ್ದ ಜನಾರ್ದನ ರೆಡ್ಡಿ; ‘ಕಮಲ’ವನ್ನು ಕೆಣಕಿದ ‘ಕೈ’

ಬೆಂಗಳೂರು: ರಾಜ್ಯದಲ್ಲಿ ನಾನೇ ಕಟ್ಟಿ ಬೆಳೆಸಿದ ಪಕ್ಷದವರೇ ನನಗೆ ತೊಂದರೆ ಕೊಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಮುಂದಿನ ರಾಜಕೀಯ ನಡೆ ನಿರ್ಧರಿಸುತ್ತೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಬಿಜೆಪಿಯವರೇ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಗೋಳಾಡುತ್ತಿರುವುದು ಯಾರ ವಿರುದ್ಧ? ಗೆಳೆಯನನ್ನು ಬಿಟ್ಟಿರುವ ಶ್ರೀರಾಮುಲು ವಿರುದ್ಧವೇ? ಋಣ ಮರೆತಿರುವ ಬಿ ಎಸ್ ಯಡಿಯೂರಪ್ಪ ವಿರುದ್ಧವೇ? ಆಪರೇಷನ್ ಕಮಲ ಎಂಬ ಕೊಳಕು ರಾಜಕೀಯಕ್ಕೆ ನಾಂದಿ ಹಾಡಿದವರನ್ನು ತುಳಿದು ಹಾಕಿದ ರಾಜ್ಯ ಬಿಜೆಪಿಯ ವಿರುದ್ಧವೇ ಎಂದು ಪ್ರಶ್ನಿಸಿದೆ.

Join Whatsapp
Exit mobile version