ಲಕ್ನೋ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಮುಸ್ಲಿಂ ವ್ಯಕ್ತಿಗೆ ಥಳಿಸಿ, ಜೈ ಶ್ರೀ ರಾಮ್ ಘೋಷಿಸಲು ಒತ್ತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದರು. ಅಮನ್ ಗುಪ್ತ, ರಾಜೇಶ್ ಅಲಿಯಾಸ್ ಜಯ, ರಾಹುಲ್ ಬಂಧಿತರು. ಅಮನ್ ಗುಪ್ತ ವಿಶ್ವ ಹಿಂದೂ ಪರಿಷತ್ ಸದಸ್ಯ ಎಂದು ಪೊಲೀಸ್ ಆಯುಕ್ತ ಅಸೀಮ ಅರುಣ್ ತಿಳಿಸಿದರು.
45 ವರ್ಷದ ಎಸ್ರಾರ್ ಅಹ್ಮದ್ ಹಲ್ಲೆಗೊಳಗಾದ ರಿಕ್ಷಾ ಚಾಲಕ. ಮೂವರು ಅವರ ಮೇಲೆ ಹಲ್ಲೆ ನಡೆಸುವಾಗ ಮಗಳು ತಂದೆಯನ್ನು ರಕ್ಷಿಸಲು ಮೊರೆಯಿಡುತ್ತಿರುವ, ಒದ್ದಾಡುತ್ತಿರುವ ದೃಶ್ಯ ವೈರಲ್ ಆಗಿತ್ತು.
ಉತ್ತರ ಪ್ರದೇಶದ ಕಾನ್ಪುರ ಪಟ್ಟಣದಲ್ಲಿ 45 ವಯಸ್ಸಿನ ಮುಸ್ಲಿಮ್ ವ್ಯಕ್ತಿ ಎಸ್ರಾರ್ ಅಹ್ಮದ್ ಅವರನ್ನು ಜೈ ಶ್ರೀರಾಮ್ ಕೂಗುವಂತೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ಹಲ್ಲೆಯ ಮೊದಲು ಸಂತ್ರಸ್ತ ವ್ಯಕ್ತಿಯ ಪುತ್ರಿಯ ಸಮ್ಮುಖದಲ್ಲಿ ಮೆರವಣಿಗೆ ನಡೆಸಲಾಗಿದೆಯೆಂದು ಬಹಿರಂಗೊಂಡಿರುವ ವೀಡಿಯೋದಲ್ಲಿ ದಾಖಲಾಗಿತ್ತು.
ಸ್ಥಳೀಯರು ಚಿತ್ರೀಕರಿಸಿದ ವೀಡಿಯೋದಲ್ಲಿ ಆ ವ್ಯಕ್ತಿಗೆ ಹೊಡೆಯುತ್ತಿದ್ದಾಗ ಮಗಳು ತನ್ನ ತಂದೆಯನ್ನು ಬಿಟ್ಟು ಬಿಡುವಂತೆ ದಾಳಿಕೋರರಲ್ಲಿ ಬೇಡುತ್ತಿರುವ ದೃಶ್ಯ ಇತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಗಳಲ್ಲೇ ಬಂಧಿತ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.