ಮಂಗಳೂರು: ಹಯಾತುಲ್ ಇಸ್ಲಾಂ ಬದ್ರಿಯಾ ಜುಮಾ ಮಸೀದಿ ಎದುರುಪದವು ಮೂಡುಶೆಡ್ಡೆ ಇದರ ೨೦೨೧-೨೨ ನೇ ವಾರ್ಷಿಕ ಮಹಾ ಸಭೆಯು ಹಯಾತುಲ್ ಇಸ್ಲಾಂ ಬದ್ರಿಯಾ ಮಸೀದಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಸಭಾಧ್ಯಕ್ಷತೆಯನ್ನು ಮಸೀದಿ ಖತೀಬರಾದ ನಝೀರ್ ದಾರಿಮಿ ಶಂಬೂರು ವಹಿಸಿದ್ದರು. ಈ ವೇಳೆ ಈ ಕಳೆದ ಅವಧಿಯ ವಾರ್ಷಿಕ ಲೆಕ್ಕಪತ್ರ ಮಂಡನಾ ಕಾರ್ಯ ನಡೆಯಿತು. ಬಳಿಕ ಮಸೀದಿಯ ನೂತನ ಆಡಳಿತ ಕಮೀಟಿಯ ಆಯ್ಕೆ ನಡೆಸಲಾಯಿತು.
ಹಯಾತುಲ್ ಇಸ್ಲಾಂ ಬದ್ರಿಯಾ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಹಾಜಿ ಮಹಮ್ಮದ್ ಹನೀಫ್, ಉಪಾಧ್ಯಕ್ಷರಾಗಿ ಶಾಹುಲ್ ಹಮೀದ್, ಕಾರ್ಯದರ್ಶಿಯಾಗಿ ಮಹಮ್ಮದ್ ಆರೀಫ್, ಜೊತೆ ಕಾರ್ಯದರ್ಶಿ ಜಮಾಲುದ್ದೀನ್, ಕೋಶಾಧಿಕಾರಿ ಸಾಜುದ್ದೀನ್ ರನ್ನು ಆಯ್ಕೆ ಮಾಡಲಾಯಿತು. ಇನ್ನು ನೂತನ ಆಡಳಿತ ಸಮಿತಿಯ ಪದಾಧಿಕಾರಿಗಳಾಗಿ ಅಬ್ದುಲ್ ಬಶೀರ್, ಎ ಪಿ ಇಕ್ಬಾಲ್, ಸಿರಾಜ್ ಮೋನು, ಮಹಮ್ಮದ್ ಮನ್ಸೂರ್, ಸೈಪುದ್ದೀನ್, ಅಥಾವುಲ್ಲಾ, ಸೇಕ್ ಮೋನು, ಅಹಮ್ಮದ್ ಬಾವ ರನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ಮುಂದಿನ ವರ್ಷಗಳ ಮಸೀದಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ನೂತನ ಕಮೀಟಿ ಚರ್ಚೆ ನಡೆಸಿತು. ಈ ಸಂಧರ್ಭ ಮಸೀದಿ ಮಾಜಿ ಕಾರ್ಯದರ್ಶಿ ಮಹಮ್ಮದ್ ಹನೀಫ್ ಉಪಸ್ಥಿತರಿದ್ದರು.