Home ಟಾಪ್ ಸುದ್ದಿಗಳು ದೇಶೀಯ ವಿಮಾನಗಳ ಪ್ರಯಾಣ ದರ ಹೆಚ್ಚಳ

ದೇಶೀಯ ವಿಮಾನಗಳ ಪ್ರಯಾಣ ದರ ಹೆಚ್ಚಳ

ನವದೆಹಲಿ: ಶೇ.12.5ರಷ್ಟು ದರ ಏರಿಸುವ ಮೂಲಕ ವಿಮಾನ ಪ್ರಯಾಣಿಕರಿಗೆ ನಾಗರಿಕ ವಿಮಾನಯಾನ ಸಚಿವಾಲಯವು ಶಾಕ್ ನೀಡಿದೆ. ಗುರುವಾರ ತಡರಾತ್ರಿ ಸಚಿವಾಲಯವು ಕೆಳಸ್ತರ ಹಾಗೂ ಮೇಲ್ ಸ್ತರದ ಪ್ರಯಾಣ ದರದ ಮಿತಿಯನ್ನು ಕನಿಷ್ಠ ಮತ್ತು ಗರಿಷ್ಠ ಮಿತಿಗಳನ್ನು ಶೇ.12.5ರಷ್ಟು ಹೆಚ್ಚಿಸಿದೆ.

ಮೇ 2020ರಿಂದ ನಾಗರಿಕ ವಿಮಾನಯಾನ ಸಚಿವಾಲಯವು ದೇಶೀಯ ವಿಮಾನಯಾನ ದರಗಳನ್ನು ಮಿತಿಗೊಳಿಸಿತ್ತು. ಸೀಮಿತ ಸಂಖ್ಯೆಯ ವಿಮಾನಗಳ ಹಾರಾಟ ಕಾರಣದಿಂದ ಟಿಕೆಟ್ ದರಗಳನ್ನು ನಿಯಂತ್ರಣದಲ್ಲಿಡಲು ಬೆಲೆ ಮಿತಿ ಹಾಕಲಾಗಿತ್ತು.
ಈವರೆಗೆ ದೇಶೀಯ ವಿಮಾನಗಳ ಕನಿಷ್ಠ ವಿಮಾನದ ದರ 2,600 ರಿಂದ ರೂ .7,800 ಮತ್ತು ಗರಿಷ್ಠ ರೂ. 8,700 ರಿಂದ ರೂ. 24,200ವರೆಗೆ ಇತ್ತು. ಇದೀಗ ಮೂಲ ಬೆಲೆಯು ರೂ 2,925 ರಿಂದ ರೂ 8,775ವರೆಗೆ ಇರುತ್ತದೆ.
ಉದಾಹರಣೆಗೆ, ದೆಹಲಿಯಿಂದ ಮುಂಬೈಗೆ ಪ್ರಯಾಣಿಸುವ ಪ್ರಯಾಣಿಕರಿಗೆ, ಕನಿಷ್ಠ ದರವನ್ನು ರೂ. 5287.5ಕ್ಕೆ ನಿಗದಿಪಡಿಸಲಾಗುತ್ತದೆ. ಇದು ಈವರೆಗೆ ಅನ್ವಯವಾಗುತ್ತಿದ್ದ ರೂ 4,700 ರೂ.ಗಿಂತ ಗಣನೀಯ ಏರಿಕೆಯಾಗಿದೆ.
ಏವಿಯೇಷನ್ ಟರ್ಬೈನ್ ಇಂಧನದ ಬೆಲೆ ಹೆಚ್ಚಳದಿಂದಾಗಿ ವಿಮಾನಯಾನ ಸಂಸ್ಥೆಗಳನ್ನು ಸರಿದೂಗಿಸಲು ಶುಲ್ಕದ ಬ್ಯಾಂಡ್ಗಳನ್ನು ಮೂರು ಸಂದರ್ಭಗಳಲ್ಲಿ ಪರಿಷ್ಕರಿಸಲಾಗಿದೆ. ಎಟಿಎಫ್ ವೆಚ್ಚದ ಹೆಚ್ಚಳವನ್ನು ಅವಲಂಬಿಸಿರುತ್ತದೆ ಎಂದು ಅವರು ಹೇಳಿದ್ದಾರೆ.

Join Whatsapp
Exit mobile version