ಗುಜರಾತ್ ಕಾಂಗ್ರೆಸ್ ಅಧ್ಯಕ್ಷರಾಗಿ ಜಗದೀಶ್ ಠಾಕೂರ್ ನೇಮಕ

Prasthutha|

ಅಹ್ಮದಾಬಾದ್ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಗುಜರಾತ್ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಅಮಿತ್ ಚಾವ್ಡಾರ ಬದಲು ಜಗದೀಶ್ ಠಾಕೂರ್ ಅವರನ್ನು ನೇಮಿಸಿದ್ದಾರೆ.

- Advertisement -


ಮುಂದಿನ ವರ್ಷ ನಡೆಯುವ ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ. ಬಿಜೆಪಿಯಿಂದ ಮತ್ತೆ ಅಧಿಕಾರವನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂಬ ಗುರಿಯನ್ನು ಕಾಂಗ್ರೆಸ್ ಇಟ್ಟುಕೊಂಡಿದೆ.


ಶುಕ್ರವಾರವೇ ಪಕ್ಷದ ಸಕಲ ಮೇಲ್ವಿಚಾರಣೆಯನ್ನು ಕೈಗೆ ತೆಗೆದುಕೊಳ್ಳುವಂತೆ ಜಗದೀಶ್ ಅವರಿಗೆ ಸೂಚಿಸಿರುವುದಾಗಿ ಪಕ್ಷದ ಹೈಕಮಾಂಡ್ ಮೂಲಗಳು ತಿಳಿಸಿವೆ.
ಎಐಸಿಸಿ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರು ಹಿಂದಿನ ಅಧ್ಯಕ್ಷರಾದ ಅಮಿತ್ ಚಾವ್ಡಾ ಅವರ ಸೇವೆಯನ್ನು ಹೊಗಳಿ, ಅವರಿಗೆ ಶುಭಾಶಯ ಕೋರಿದ್ದಾರೆ.

Join Whatsapp
Exit mobile version