ಮೇಲ್ಜಾತಿ ಜನರ ಜೊತೆ ಊಟ ಮಾಡಿದ್ದಕ್ಕೆ ದಲಿತ ವ್ಯಕ್ತಿಯನ್ನು ಥಳಿಸಿ ಕೊಂದ ಮೇಲ್ಜಾತಿಯವರು

Prasthutha|

ಮದುವೆಯೊಂದರಲ್ಲಿ ಮೇಲ್ಜಾತಿ ಜನರ ಜೊತೆ ಕುಳಿತು ಊಟ ಮಾಡಿದನೆಂಬ ಕಾರಣಕ್ಕೆ ದಲಿತ ವ್ಯಕ್ತಿಯೊಬ್ಬನನ್ನು ಮೇಲ್ಜಾತಿಯವರು ತೀವ್ರವಾಗಿ ಥಳಿಸಿ ಹತ್ಯೆ ಮಾಡಿರುವ ದಾರುಣ ಘಟನೆ ನೈನಿಯತಾಲ್ ಜಿಲ್ಲೆಯ ಪಿತೋರ್ ಗಡದ ಚಂಪಾವತ್ ನಲ್ಲಿ ನಡೆದಿದೆ.

- Advertisement -


ರಮೇಶ್ ರಾಮ್ ( 45) ಎಂಬವರೇ ಮೇಲ್ಜಾತಿ ಜನರಿಂದ ತೀವ್ರವಾಗಿ ಹಲ್ಲೆಗೊಳಗಾಗಿ ಹತ್ಯೆಗೀಡಾದವರು.
ರಾತ್ರಿ ನಡೆದ ಮದುವೆ ಊಟದ ವೇಳೆ ಹಿಂದೂ ಮೇಲ್ಜಾತಿ ಜನರು ಹಿಗ್ಗಾ ಮುಗ್ಗಾ ಥಳಿಸಿದ್ದರಿಂದ ತಲೆ ಮತ್ತು ದೇಹದ ಮೇಲೆ ತೀವ್ರ ಗಾಯಗೊಂಡ ರಾಮ್ ಅಲ್ಲೇ ತುಸು ದೂರದ ಟೈಲರಿಂಗ್ ಅಂಗಡಿಯತ್ತ ಓಡಿ ಕುಸಿದು ಬಿದ್ದಿದ್ದಾರೆ. ಟೈಲರ್ ಅಂಗಡಿಯವನು ರಾಮ್ ಅವರ ಪತ್ನಿಗೆ ಈ ಹಲ್ಲೆಯ ಬಗ್ಗೆ ಸುದ್ದಿ ಮುಟ್ಟಿಸಿದ್ದಾರೆ.


ಹಲ್ದ್ ವಾನಿಯ ಆಸ್ಪತ್ರೆಗೆ ರಮೇಶ್ ರಾಮ್ ರನ್ನು ಸಾಗಿಸಲಾಯಿತು. ಆದರೆ ಅದಾಗಲೇ ತೀವ್ರ ರಕ್ತಸ್ರಾವಕ್ಕೀಡಾಗಿದ್ದ ರಾಮ್ ಅಸುನೀಗಿದ್ದರು.
ರಾಮ್ ಅವರ ಪತ್ನಿ ತುಲ್ಸಿ ದೇವಿಯ ದೂರಿನ ಮೇಲೆ ಪಾಟಿ ಪೊಲೀಸ್ ಠಾಣೆಯ ಅಧಿಕಾರಿ ಹರಿಪ್ರಸಾದರು ಅಪರಿಚಿತ ಗುಂಪಿನ ಮೇಲೆ ಎಫ್ ಐಆರ್ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

Join Whatsapp
Exit mobile version