Home ಟಾಪ್ ಸುದ್ದಿಗಳು ಪಿಸ್ತೂಲ್ ಹಿಡಿದು ಬಂದವರನ್ನು ಕೈಯಲ್ಲಿ ಕೋಲು ಹಿಡಿದು ಓಡಿಸಿದ ಮಹಿಳೆ

ಪಿಸ್ತೂಲ್ ಹಿಡಿದು ಬಂದವರನ್ನು ಕೈಯಲ್ಲಿ ಕೋಲು ಹಿಡಿದು ಓಡಿಸಿದ ಮಹಿಳೆ

ಚಂಡೀಗಡ: ಪಿಸ್ತೂಲ್ ಹಿಡಿದು ಬಂದವರನ್ನು ಮಹಿಳೆಯೊಬ್ಬರು ಕೈಯಲ್ಲಿ ಕೋಲು ಹಿಡಿದು ಓಡಿಸಿದ ಘಟನೆ ಹರಿಯಾಣದ ಭಿವಾನಿ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಈ ಕುರಿತು ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.


ವೈರಲ್ ವೀಡಿಯೋದಲ್ಲಿ ಎರಡು ಬೈಕ್ ಗಳಲ್ಲಿ ಬಂದಿದ್ದ ನಾಲ್ವರಲ್ಲಿ ಒಬ್ಬ, ಮನೆಮುಂದೆ ನಿಂತಿದ್ದ ವ್ಯಕ್ತಿಯೊಬ್ಬನಿಗೆ ಏಕಾಏಕಿ ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸುತ್ತಾನೆ. ಈ ವೇಳೆ ದಾಳಿಯಿಂದ ವಿಚಲೀತನಾದ ವ್ಯಕ್ತಿ ಮನೆಯ ಗೇಟ್ ತಳ್ಳಿ ಒಳಹೋಗುತ್ತಾನೆ. ಈ ವೇಳೆ ದಾಳಿಕೋರರು ಆತನನ್ನು ಅಟ್ಟಿಸಿಕೊಂಡು ಹೋಗುತ್ತಿರುವಾಗ ಕೈಯಲ್ಲಿ ಉದ್ದನೆಯ ಕೋಲು ಹಿಡಿದು ಬಂದ ಮಹಿಳೆ ದಾಳಿಕೋರರನ್ನು ಬೆದರಿಸುತ್ತಾರೆ. ಮಹಿಳೆಯನ್ನು ನೋಡಿದ ದಾಳಿಕೋರರು ಅಲ್ಲಿಂದ ಕಾಲ್ಕಿತ್ತು ಹೋಗುತ್ತಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version