ಟೆಲ್ ಅವೀವ್: ಗಾಝಾದಲ್ಲಿ ತಡರಾತ್ರಿ ಇಸ್ರೇಲ್ ನಡೆಸಿದ ವೈಮಾನಿಕ ಮತ್ತು ಗುಂಡಿನ ದಾಳಿಯಲ್ಲಿ ಮಾನವೀಯ ನೆರವಿಗಾಗಿ ಕಾಯುತ್ತಿದ್ದ 45 ಜನರು ಸೇರಿದಂತೆ 94 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಗಾಜಾದ ಜನರಿಗೆ ಆಹಾರ ಸೇರಿದಂತೆ ಹಲವು ರೀತಿಯ ಮಾನವೀಯ ನೆರವು ನೀಡುತ್ತಿದ್ದ ಅಮೆರಿಕದ ‘ಗಾಜಾ ಹ್ಯುಮ್ಯಾನಿಟೇರಿಯನ್ ಫೌಂಡೇಶನ್’ಗೆ ಸೇರಿದ ಸ್ಥಳಗಳಲ್ಲಿ ಐವರು ಮೃತಪಟ್ಟಿದ್ದಾರೆ. ನೆರವು ಸಾಮಗ್ರಿಗಳಿದ್ದ ಟ್ರಕ್‌ಗಾಗಿ ಕಾಯುತ್ತಿದ್ದ ಹಲವರು ದಾಳಿಯಲ್ಲಿ ಮೃತಪಟ್ಟಿದ್ದಾರೆ.
