Home ಟಾಪ್ ಸುದ್ದಿಗಳು ಗಾಝಾದಲ್ಲಿ 60 ದಿನಗಳ ಕದನ ವಿರಾಮ ಅಂತಿಮಗೊಳಿಸಲು ಇಸ್ರೇಲ್ ಒಪ್ಪಿಗೆ: ಟ್ರಂಪ್

ಗಾಝಾದಲ್ಲಿ 60 ದಿನಗಳ ಕದನ ವಿರಾಮ ಅಂತಿಮಗೊಳಿಸಲು ಇಸ್ರೇಲ್ ಒಪ್ಪಿಗೆ: ಟ್ರಂಪ್

0

ವಾಷಿಂಗ್ಟನ್: ಗಾಝಾದಲ್ಲಿ 60 ದಿನಗಳ ಕದನ ವಿರಾಮವನ್ನು ಅಂತಿಮಗೊಳಿಸಲು ಅಗತ್ಯವಾದ ಷರತ್ತುಗಳಿಗೆ ಇಸ್ರೇಲ್ ಒಪ್ಪಿಕೊಂಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕದನ ವಿರಾಮ ಒಪ್ಪಂದವನ್ನು ತಿರಸ್ಕರಿಸುವುದರ ವಿರುದ್ಧ ಟ್ರಂಪ್, ಹಮಾಸ್‌ಗೆ ಎಚ್ಚರಿಕೆ ನೀಡಿದ್ದಾರೆ. ಹಾಗೇನಾದರೂ ಆದಲ್ಲಿ, ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆಯೇ ಹೊರತು ತಹಬದಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ.

ಶಾಂತಿ ಸ್ಥಾಪಿಸಲು ಬಹಳ ಶ್ರಮಿಸಿರುವ ಕತಾರ್ ಮತ್ತು ಈಜಿಫ್ಟ್ ಅಂತಿಮ ರೂಪುರೇಷೆ ನೀಡಲಿವೆ. ಪ್ರಸ್ತಾವಿತ ಕದನ ವಿರಾಮ ಅವಧಿಯಲ್ಲಿ ಯುದ್ಧವನ್ನು ಕೊನೆಗೊಳಿಸುವ ಮಾತುಕತೆಗಳು ಮುಂದುವರಿಯುತ್ತವೆ ಎಂದು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version