Home ಕ್ರೀಡೆ IPL ಕಾಮೆಂಟರಿ ಪ್ಯಾನೆಲ್‌ ನಿಂದ ಇರ್ಫಾನ್ ಪಠಾಣ್ ಔಟ್: ಕಾರಣವೇನು ಗೊತ್ತಾ?

IPL ಕಾಮೆಂಟರಿ ಪ್ಯಾನೆಲ್‌ ನಿಂದ ಇರ್ಫಾನ್ ಪಠಾಣ್ ಔಟ್: ಕಾರಣವೇನು ಗೊತ್ತಾ?

0

ಟೀಮ್ ಇಂಡಿಯಾದ ಮಾಜಿ ಆಲ್​ ರೌಂಡರ್ ಇರ್ಫಾನ್ ಫಠಾಣ್ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಕಾಮೆಂಟರಿ ಪ್ಯಾನೆಲ್​ನಿಂದ ಹೊರಬಿದ್ದಿದ್ದಾರೆ. ಈ ಹಿಂದೆ ಪ್ರತಿ ಸೀಸನ್ ​ನಲ್ಲೂ ಕಾಮೆಂಟರಿ ತಂಡದ ಭಾಗವಾಗಿರುತ್ತಿದ್ದ ಇರ್ಫಾಣ್ ಅವರನ್ನು ಈ ಬಾರಿ ಕೈ ಬಿಡಲು ಮುಖ್ಯ ಕಾರಣ ಅವರ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪ.

ಕಾಮೆಂಟರಿ ವೇಳೆ ಇರ್ಫಾನ್ ಪಠಾಣ್ ಕೆಲ ಆಟಗಾರರನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಅವರ ಟೀಕಾತ್ಮಕ ಕಾಮೆಂಟ್‌ ಗಳು ವೈಯಕ್ತಿಕ ಪ್ರೇರಿತವಾಗಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಅವರನ್ನು ಐಪಿಎಲ್ 2025ರ ಕಾಮೆಂಟ್ರಿ ಪ್ಯಾನೆಲ್​ ನಿಂದ ಕೈ ಬಿಡಲಾಗಿದೆ ಎಂದು ವರದಿಯಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಇರ್ಫಾನ್ ಪಠಾಣ್ ಕೆಲವು ಭಾರತೀಯ ಆಟಗಾರರ ವಿರುದ್ಧ ಮಾತನಾಡಿದ್ದರಿಂದ ಅವರನ್ನು ಕಾಮೆಂಟರಿ ಪ್ಯಾನೆಲ್‌ ನಿಂದ ಹೊರಗಿಡಲಾಗಿದೆ. ಪಠಾಣ್ ಅವರ ವ್ಯಾಖ್ಯಾನದ ಬಗ್ಗೆ ಕೆಲವು ಆಟಗಾರರು ದೂರು ನೀಡಿದ್ದರು. ಈ ಆಟಗಾರರು ಇರ್ಫಾನ್ ತಮ್ಮ ಬಗ್ಗೆ ವೈಯಕ್ತಿಕ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದರಿಂದಾಗಿ ಬಿಸಿಸಿಐ ಅವರನ್ನು ಈ ಬಾರಿಯ ಐಪಿಎಲ್ ಕಾಮೆಂಟ್ರಿ ಪ್ಯಾನೆಲ್ ​ಗೆ ಪರಿಗಣಿಸದಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ಸಂಜಯ್ ಮಂಜ್ರೇಕರ್ ವಿರುದ್ಧ ಕೂಡ ಇಂತಹದ್ದೇ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಅವರನ್ನು ಕೆಲ ವರ್ಷಗಳ ಐಪಿಎಲ್ ಕಾಮೆಂಟರಿ ಪ್ಯಾನೆಲ್​ ನಿಂದ ಹೊರಗಿಡಲಾಗಿತ್ತು. ಇದೀಗ ಇರ್ಫಾನ್ ಪಠಾಣ್ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version