ಆಪಲ್ ತನ್ನ ಇತ್ತೀಚಿನ ಸರಣಿಯ ಐಫೋನ್ 16 ಅನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಕಂಪನಿಯ ನಾಲ್ಕು ಮಾದರಿಗಳು ಸೇರಿವೆ – iPhone 16, iPhone 16 Plus, iPhone 16 Pro ಮತ್ತು iPhone 16 Pro Max. ಹೊಸ ಐಫೋನ್ನಲ್ಲಿ ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳ ಬೆಂಬಲವನ್ನು ಅಭಿಮಾನಿಗಳಿಗೆ ನೀಡಲಾಗುತ್ತಿದೆ.
ಕಂಪನಿಯು ಈ ಹೊಸ ಐಫೋನ್ ಗಳನ್ನು ಇತ್ತೀಚಿನ A18 ಸರಣಿಯ ಚಿಪ್ಸೆಟ್ನೊಂದಿಗೆ ಪರಿಚಯಿಸಿದೆ. ಇದರೊಂದಿಗೆ, ದೀರ್ಘಾವಧಿಯ ಬ್ಯಾಟರಿ ಅವಧಿಯೊಂದಿಗೆ ಫೋನ್ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಅಲ್ಲದೆ, ಕಂಪನಿಯ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ iOS 18 ಅಪ್ ಡೇಟ್ ಬಿಡುಗಡೆಯಾದ ನಂತರ, ಹೊಸ iPhone 16 ಸರಣಿಯು ಹೊಸ OS ಅನ್ನು ಸಹ ಪಡೆಯುತ್ತದೆ.
ಐಫೋನ್ 16 ಸರಣಿ ಭಾರತದಲ್ಲಿ ಎಷ್ಟು ಮೊತ್ತಕ್ಕೆ ಲಭ್ಯ ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲಾ ನಾಲ್ಕು ಐಫೋನ್ ಗಳ ಬೆಲೆ ಎಷ್ಟು? ಇಲ್ಲಿದೆ ವಿವರ
ಐಫೋನ್ 16 ಮತ್ತು 16 ಪ್ಲಸ್ ಬೆಲೆ
iPhone 16 128GB – ರೂ 79,900
iPhone 16 256GB – ರೂ 89,900
iPhone 16 512GB – 1,09,900 ರೂ
iPhone 16 Plus 128GB – 89,900 ರೂ
iPhone 16 Plus 256GB – 99,900 ರೂ
iPhone 16 Plus 512GB – 1,19,900 ರೂ.
iPhone 16 Pro ಮತ್ತು 16 Pro Max ಬೆಲೆ
iPhone 16 Pro 128GB – ರೂ 1,19,900
iPhone 16 Pro 256GB – ರೂ 1,29,900
iPhone 16 Pro 512GB – ರೂ 1,49,900
iPhone 16 Pro 1TB – ರೂ 1,69,900.
iPhone 16 Pro Max 256GB – ರೂ 1,44,900
iPhone 16 Pro Max 512GB – ರೂ 1,64,900
iPhone 16 Pro Max 1TB – ರೂ 1,84,900.
ಐಫೋನ್ 16 ಸರಣಿಯ ಮುಂಗಡ ಬುಕ್ಕಿಂಗ್ ಭಾರತದಲ್ಲಿ ಸೆಪ್ಟೆಂಬರ್ 13 ರಂದು ಸಂಜೆ 5:30 ಕ್ಕೆ ಪ್ರಾರಂಭವಾಗುತ್ತವೆ. ಐಫೋನ್ 16 ನ ಮೊದಲ ಮಾರಾಟ ಸೆಪ್ಟೆಂಬರ್ 20 ರಂದು ನಡೆಯಲಿದೆ.