ಸಚಿವರ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಯುವತಿಯ ಮೇಲೆ ಮಸಿ ದಾಳಿ

Prasthutha|

ನವದೆಹಲಿ: ರಾಜಸ್ಥಾನದ ಸಚಿವ ಮಹೇಶ್ ಜೋಶಿಯ ಪುತ್ರನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಯುವತಿಯ ಮೇಲೆ ದೆಹಲಿಯ ರಸ್ತೆಯೊಂದರಲ್ಲಿ ಮಸಿ ದಾಳಿ ನಡೆಸಲಾಗಿದೆ. ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೇಲೆ ಇಬ್ಬರು ಅಪರಿಚಿತರು ಯುವತಿಗೆ ಮಸಿ ಎರಚಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

- Advertisement -

ಮಸಿ ದಾಳಿಗೊಳಗಾದ ಯುವತಿಯನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಿ ಪರೀಕ್ಷಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ದೆಹಲಿಯಲ್ಲಿ ಕಾಳಿಂದಿ ಕುಂಜ್ ರಸ್ತೆಯ ಬಳಿ ಶನಿವಾರ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ಜನವರಿಯಿಂದ ಈ ವರ್ಷದ ಏಪ್ರಿಲ್ ನಡುವೆ ಸಚಿವರ ಮಗ ರೋಹಿತ್ ಜೋಶಿ ತನ್ನ ಮೇಲೆ ಹಲವಾರು ಸಂದರ್ಭಗಳಲ್ಲಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ ಯುವತಿಯು ಪ್ರಕರಣವನ್ನು ದಾಖಲಿಸಿದ್ದರು, ರೋಹಿತ್ ಜೋಶಿ ವಿರುದ್ಧ ಅಪಹರಣ ಮತ್ತು ಬ್ಲ್ಯಾಕ್‌ಮೇಲ್ ಆರೋಪವನ್ನೂ ಯುವತಿ ಮಾಡಿದ್ದಾರೆ.

Join Whatsapp
Exit mobile version