Home ಜಾಲತಾಣದಿಂದ ಪ್ರಚೋದನಾಕಾರಿ ಹೇಳಿಕೆ: ಸಚಿವ ಅಶ್ವತ್ಥನಾರಾಯಣರನ್ನು ತಕ್ಷಣ ಬಂಧಿಸಬೇಕು: ಬಿ.ಆರ್. ಭಾಸ್ಕರ್ ಪ್ರಸಾದ್  

ಪ್ರಚೋದನಾಕಾರಿ ಹೇಳಿಕೆ: ಸಚಿವ ಅಶ್ವತ್ಥನಾರಾಯಣರನ್ನು ತಕ್ಷಣ ಬಂಧಿಸಬೇಕು: ಬಿ.ಆರ್. ಭಾಸ್ಕರ್ ಪ್ರಸಾದ್  

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು  ಹೊಡೆದು ಹಾಕಬೇಕು ಎಂದು ಬಹಿರಂಗವಾಗಿ ಕೊಲೆಗೆ ಪ್ರಚೋದನೆ ನೀಡಿರುವ ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್. ಅಶ್ವತ್ಥನಾರಾಯಣ ರವರ ಕೊಲೆಗಡುಕತನದ ಹೇಳಿಕೆಯನ್ನು  ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)  ಪಕ್ಷ ಬಲವಾಗಿ ಖಂಡಿಸುತ್ತದೆ ಮತ್ತು ಕೂಡಲೇ ಅಶ್ವತ್ಥನಾರಾಯಣ ಅವರನ್ನು ಬಂಧಿಸಲು ಆಗ್ರಹಿಸುತ್ತದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ಭಾಸ್ಕರ್ ಪ್ರಸಾದ್ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರು ಮಂಡ್ಯದಲ್ಲಿ ನಡೆದ ಬಿಜೆಪಿ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ಮಾತನಾಡುತ್ತಾ, ನಂಜೇಗೌಡ ಮತ್ತು ಉರಿಗೌಡರು ಟಿಪ್ಪು ಸುಲ್ತಾನರನ್ನು ಹೊಡೆದು ಹಾಕಿದಂತೆ! ಮೇಲಕ್ಕೆ ಕಳಿಸಿದಂತೆ! ಸಿದ್ದರಾಮಯ್ಯನವರನ್ನು ಹೊಡೆದು ಹಾಕಬೇಕು, ಮೇಲಕ್ಕೆ ಕಳಿಸಬೇಕು ಎಂದು ಮಾತನಾಡಿದ್ದಾರೆ. ಆ ಮೂಲಕ ಕೊಲೆಗೆ ಪ್ರಚೋದಸುವ ಅಪರಾಧವನ್ನು ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೊಡೆದು ಹಾಕಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿ ಅವರ ಕೊಲೆಗೆ ಬಹಿರಂಗವಾಗಿ ಪ್ರಚೋದನೆ ನೀಡಿರುವುದು ಕಾನೂನು ಪ್ರಕಾರ ಅಪರಾಧವಾಗಿರುತ್ತದೆ. ಸಚಿವರ ಅಪರಾಧಿಯ ಮತ್ತು ಕೊಲೆಗಡುಕತನದ ಹೇಳಿಕೆಯನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಖಂಡಿಸುತ್ತದೆ ಮತ್ತು ಅವರ ಮೇಲೆ ಕೂಡಲೇ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಪೋಲಿಸ್ ಇಲಾಖೆಯನ್ನು ಕೋರುತ್ತದೆ ಎಂದು ಭಾಸ್ಕರ್ ಅವರು  ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp
Exit mobile version