ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪನೌತಿ (ಅಪಶಕುನ) ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ಜಾರಿಗೊಳಿಸಿದ್ದು, ಈ ಹೇಳಿಕೆ ಕುರಿತಂತೆ ವಿವರಣೆ ನೀಡುವಂತೆ ಸೂಚಿಸಿದೆ. ಬಿಜೆಪಿ ದಾಖಲಿಸಿರುವ ದೂರಿನ ಆಧಾರದಲ್ಲಿ ಆಯೋಗ ರಾಹುಲ್ ಗಾಂಧಿಗೆ ಈ ನೋಟಿಸ್ ನೀಡಿದ್ದು, ರಾಹುಲ್ ಗಾಂಧಿ ‘ಪನೌತಿ’ ಹೇಳಿಕೆಗೆ ಶನಿವಾರದೊಳಗೆ ಉತ್ತರ ನೀಡಬೇಕಿದೆ.
ರಾಜಕೀಯ ಎದುರಾಳಿಗಳ ವಿರುದ್ಧ ಆಧಾರರಹಿತವಾಗಿ ಆರೋಪ ಹೊರಿಸುವುದು ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ರಾಹುಲ್‌ಗೆ ಕಳುಹಿಸಿದ ನೋಟಿಸಿನಲ್ಲಿ
ಚುನಾವಣಾ ಆಯೋಗ ಹೇಳಿದೆ.
ರಾಜಸ್ಥಾನದಲ್ಲಿ ಚುನಾವಣಾ ಸಭೆಯಲ್ಲಿಮಾತನಾಡಿದ ರಾಹುಲ್ ಗಾಂಧಿ, ನಮ್ಮ ಹುಡುಗರು ವಿಶ್ವ ಕಪ್ ಗೆಲ್ಲುತ್ತಿದ್ದರು. ಆದರೆ ಪನೌತಿ (ಅಪಶಕುನ) ನಮಗೆ ಪಂದ್ಯ ಸೋಲುವಂತೆ ಮಾಡಿದ್ದಾರೆ ಎಂದು ಹೇಳಿದ್ದರು.