Home ಟಾಪ್ ಸುದ್ದಿಗಳು ಸತತ ಏರಿಕೆಯ ಬಳಿಕ ವಾಣಿಜ್ಯ ಸಿಲಿಂಡರ್ ಬೆಲೆ 100 ರೂ. ಇಳಿಕೆ!

ಸತತ ಏರಿಕೆಯ ಬಳಿಕ ವಾಣಿಜ್ಯ ಸಿಲಿಂಡರ್ ಬೆಲೆ 100 ರೂ. ಇಳಿಕೆ!

ಹೈದರಾಬಾದ್: ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಇಂಡಿಯನ್​ ಆಯಿಲ್​​ ಕಡಿತಗೊಳಿಸಿದೆ. 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 102 ರೂ. ಕಡಿತಗೊಳಿಸಲಾಗಿದ್ದು, 19 ಕೆಜಿಯ ಸಿಲಿಂಡರ್ 1998 ರೂ. ಗೆ ದೊರೆಯಲಿದೆ. ಚೆನ್ನೈನಲ್ಲಿ ಗ್ರಾಹಕರು 2,131 ರೂ. ಹಾಗೂ ಮುಂಬೈನಲ್ಲಿ 1948.50 ರೂ ಪಾವತಿಸಬೇಕಾಗುತ್ತದೆ. ಇದೇ ಕೋಲ್ಕತ್ತಾ ಗ್ರಾಹಕರಿಗೆ 2076 ರೂ.ಗೆ ಲಭ್ಯವಾಗಲಿದೆ.

ನವೆಂಬರ್ 1 ರಂದು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ದರವನ್ನು 266 ರೂ.ಗಳಷ್ಟು ಏರಿಕೆ ಮಾಡಲಾಗಿತ್ತು. ಡಿಸೆಂಬರ್‌ನಲ್ಲಿ ಸಿಲಿಂಡರ್‌ನ ಬೆಲೆಯನ್ನು 100 ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು.  ಆದರೆ, ಗೃಹ ಬಳಕೆ ಎಲ್‌ಪಿಜಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸತತ ಏರಿಕೆಯ ಬಳಿಕ ಇದೀಗ ವಾಣಿಜ್ಯ ಬಳಕೆ ಎಲ್​​ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ ಮಾಡಲಾಗಿದೆ.

ಈ ಬಾರಿಯೂ ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲಾಗಿತ್ತು.  ಹೊಸ ವರ್ಷದಲ್ಲೂ ದೆಹಲಿ ಮತ್ತು ಮುಂಬೈನಲ್ಲಿ 14.2 ಕೆಜಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 900 ರೂ. ಇದೆ. ಇನ್ನು ಕೋಲ್ಕತ್ತಾದಲ್ಲಿ 926 ರೂ. ಇದ್ದರೆ, ಚೆನ್ನೈನಲ್ಲಿ 916 ರೂ. ಇದೆ.

Join Whatsapp
Exit mobile version