Home ಟಾಪ್ ಸುದ್ದಿಗಳು ಉವೈಸಿಯನ್ನು ಬಂಧಿಸಿದರೆ 22 ಲಕ್ಷ ರೂ. ಬಹುಮಾನ ಘೋಷಿಸಿದ ಸಂಘಪರಿವಾರ

ಉವೈಸಿಯನ್ನು ಬಂಧಿಸಿದರೆ 22 ಲಕ್ಷ ರೂ. ಬಹುಮಾನ ಘೋಷಿಸಿದ ಸಂಘಪರಿವಾರ

ನವದೆಹಲಿ: ಎಐಎಂಐಎಂ ಮುಖ್ಯಸ್ಥರ ಅಸಾದುದ್ದೀನ್ ಉವೈಸಿಯನ್ನು ಬಂಧಿಸಿದರೆ, ಪೊಲೀಸರಿಗೆ 22 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಸಂಘಪರಿವಾರ ಘೋಷಿಸಿದೆ.

ಮಹಾತ್ಮ ಗಾಂಧೀಜಿ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ ಕಾಳಿಚರಣ್ ಮಹಾರಾಜ್ ರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಅವರ ಬಿಡುಗಡೆಗಾಗಿ ಸಂಘಪರಿವಾರದವರು ಪ್ರತಿಭಟನೆಯನ್ನು ನಡೆಸಿದ್ದಾರೆ. ಈ ವೇಳೆ ಅಸಾದುದ್ದೀನ್ ಉವೈಸಿಯನ್ನು ಬಂಧಿಸಿದರೆ, ಪೊಲೀಸರಿಗೆ 22 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದಾರೆ.

ಅಸಾದುದ್ದೀನ್ ಓವೈಸಿ, ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ಸಂಘಪರಿವಾರ ಆರೋಪಿಸಿದೆ.

Join Whatsapp
Exit mobile version