Home ಟಾಪ್ ಸುದ್ದಿಗಳು ತಾಲಿಬಾನಿಗರ ಜತೆ ಭಾರತೀಯ ಅಧಿಕಾರಿಗಳ ಮಾತುಕತೆ

ತಾಲಿಬಾನಿಗರ ಜತೆ ಭಾರತೀಯ ಅಧಿಕಾರಿಗಳ ಮಾತುಕತೆ

ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡ ಬಳಿಕ ಮೊದಲನೇ ಬಾರಿ ಭಾರತೀಯ ಅಧಿಕಾರಿಗಳು ತಾಲಿಬಾನ್ ಸರ್ಕಾರವನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಕಳೆದ ವರ್ಷ ಅಗಸ್ಟ್ ನಲ್ಲಿ ಅಮೆರಿಕಾ ಸರಕಾರ ತನ್ನ ಸೇನೆಯನ್ನು ಹಿಂಪಡೆದ ಬೆನ್ನಲೇ ತಾಲಿಬಾನಿಗಳು ಅಫ್ಘನ್ ಅನ್ನು ವಶಪಡಿಸಿಕೊಂಡಿದ್ದರು. ಇದಾದ ನಂತರ ಭಾರತದ ಅಫ್ಘಾನಿಸ್ತಾನದಲ್ಲಿದ್ದ ತನ್ನ ರಾಯಭಾರ  ಕಚೇರಿಯನ್ನು ಮುಚ್ಚಿ ತನ್ನ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿತ್ತು. ಈ ಘಟನ ನಡೆದು ಹಲವು ತಿಂಗಳ ಬಳಿಕ ಭಾರತದ ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಾಲಿಬಾನ್ ಆಡಳಿತಾಧಿಕಾರಿಗಳನ್ನು ಭೇಟಿ ಮಾಡಿದ್ದಾರೆ.

ಅಫ್ಘನ್ ನಲ್ಲಿ ಮತ್ತೆ ಭಾರತ ರಾಯಭಾರ ಕಚೇರಿಯನ್ನು ಪುನಾರಂಭಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿದ್ದು ಅಫ್ಘನ್ ವಿದ್ಯಾರ್ಥಿಗಳು ಮತ್ತು ರೋಗಿಗಳಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ ಎಂದು ಮೂಲಗಳು ತಿಳಿಸಿವೆ.

Join Whatsapp
Exit mobile version